ಕೊಡಗು : ಪ್ರಕೃತಿ ಸೌಂದರ್ಯ, ಆಚಾರ-ವಿಚಾರಗಳಿಂದ ಜಿಲ್ಲೆ ಗಮನ ಸೆಳೆದಿದೆ. ಇದೀಗ ದೇಶದಲ್ಲಿಯೇ ಉತ್ತಮ ವಾಯುಗುಣ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಗೆಗೆ ಪಾತ್ರವಾಗಿದೆ. ಕೊಡಗಿನ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸುದ್ದಿ ಗರಿ ಮೂಡಿಸಿದಂತಾಗಿದೆ.
ಎಲ್ಲಿ ನೋಡಿದ್ರು ಬ್ರಹ್ಮಗಿರಿ, ಪುಷ್ಪಗಿರಿಯ ಸುಂದರ ಬೆಟ್ಟಗುಡ್ಡಗಳ ಸಾಲು, ಹಸಿರ ವನರಾಶಿ, ನಡುವೆ ಅಚಾರ-ವಿಚಾರಗಳಿಂದ ವಿಶಿಷ್ಟವಾದ ಸಂಸ್ಕೃತಿ ಹೊಂದಿದ ಜಿಲ್ಲೆಯಾಗಿದೆ. ಈಗ ಇಲ್ಲಿ ಉತ್ತಮ ವಾಯುಗುಣ ಹೊಂದಿದೆ ಎಂಬ ಕಾರಣಕ್ಕೆ ದೇಶದ ಜನ ಕೊಡಗಿನ ಕಡೆ ನೋಡುವಂತಾಗಿದೆ.
ಇಲ್ಲಿನ ಉತ್ತಮ ಜಲ, ನೆಲ,ಗಾಳಿ ಉತ್ತಮ ವಾಯುಗುಣ ಹೊಂದುವಂತೆ ಮಾಡಿದ್ದು ದೇಶದಲ್ಲಿ ಕೊಡಗು ಪ್ರಥಮ ಸಾಲಿನಲ್ಲಿದೆ. ಕರ್ನಾಟಕದ ಗದಗ ಎರಡನೇ ಸ್ಥಾನದಲ್ಲಿದೆ.
ಕೇಂದ್ರ ವಾಯುಮಾಲಿನ್ಯ ಇಲಾಖೆ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಪ್ರಥಮ ಸ್ಥಾನ ಬಂದಿದೆ. ಅದರಲ್ಲಿ ಕೊಡಗು ಮತ್ತು ಗದಗ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ.
![Kodagu](https://etvbharatimages.akamaized.net/etvbharat/prod-images/13752845_thumbjpg.jpg)
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ರಾಜ್ಯದಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಡುತ್ತಿರುವ ಬಗ್ಗೆ ಹಲವು ಸುದ್ದಿ ಕೇಳಿ ಬರುತ್ತಿವೆ. ಇಂತಹ ವಾಯು ಗುಣಮಟ್ಟದಿಂದ ಜನರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.
ಹೆಚ್ಚುತ್ತಿರುವ ವಾಹನಗಳು, ಕಾರ್ಖಾನೆಗಳ ಮಧ್ಯೆ ನಾವು ಉಸಿರಾಡುತ್ತಿರುವ ಗಾಳಿ ಹೇಗಿದೆ ಎಂಬುದು ಮುಖ್ಯ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆಯಾಗಿದೆ.
ರಾಜ್ಯದ ಪ್ರವಾಸಿಗರ ಸ್ವರ್ಗ ಮಡಿಕೇರಿಯ ವಾಯುಗುಣ ಮಟ್ಟ ಅತ್ಯುತ್ತಮವಾಗಿದೆ. ದೇಶದಲ್ಲೇ ಉತ್ತಮ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
![Kodagu](https://etvbharatimages.akamaized.net/etvbharat/prod-images/13752845_thsumbjpg.jpg)
ಜಿಲ್ಲೆಯಲ್ಲಿ ಹೆಚ್ಚು ಕೃಷಿ ಮಾಡುವುದರಿಂದ ಕಾಫಿ ತೋಟ, ಭತ್ತದ ಗದ್ದೆಗಳು, ನದಿಗಳು, ಬೆಟ್ಟಗಳು ಹೆಚ್ಚಾಗಿವೆ. ವಾಹನಗಳ ಸಂಚಾರ ಕಡಿಮೆ ಇದೆ. ವಾಹನಗಳ ಹೊಗೆ ಇರುವುದಿಲ್ಲ. ಕೊಡಗಿಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲ. ಮಲೆನಾಡು ಪ್ರದೇಶವಾಗಿರೋದ್ರಿಂದ ಮಳೆಯ ಪ್ರಮಾಣವು ಕೂಡ ಹೆಚ್ಚಾಗಿದೆ.
ಇದರಿಂದ ಕಡಿಮೆ ಮಟ್ಟದಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ. ಗಾಳಿಯೂ ಕೂಡ ಉತ್ತಮವಾಗಿರುತ್ತದೆ. ಕೊಡಗಿಗೆ ಉತ್ತಮ ವಾಯುಗುಣ ಹೊಂದಿದ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅದಕ್ಕಾಗಿ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೊಡಗಿಗೆ ಪ್ರವಾಸಿಗರ ದಂಡೆ ಮತ್ತಷ್ಟು ಹರಿದು ಬರಲಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ