ETV Bharat / state

ಮಳೆ ನಿಂತು, ನೆರೆ ಕಡಿಮೆಯಾದರೂ ಸಂತ್ರಸ್ತರ ಕಣ್ಣೀರು ಮಾತ್ರ ನಿಂತಿಲ್ಲ.. - ಸಂತ್ರಸ್ತ

ಕೊಡಗು ಜಿಲ್ಲೆಯಲ್ಲಿ ಮಳೆ ನಿಂತು, ನೆರೆ ಕಡಿಮೆಯಾದರೂ ಪ್ರವಾಹಕ್ಕೆ ಸಿಲುಕಿದ ಕುಟುಂಬಗಳ ಕಣ್ಣೀರು ಮಾತ್ರ ನಿಂತಿಲ್ಲ. ಹಲವು ದಿನಗಳಿಂದ ನೀರು‌ ನಿಂತಿದ್ದರಿಂದ ಮನೆಗಳು ಸಂಪೂರ್ಣ ಬಿದ್ದಿವೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿವೆ.‌ ವಾಸಿಸಲು ಸೂರು ಕಲ್ಪಿಸಿಕೊಡಿ ಅಂತಾರೆ ಗ್ರಾಮಸ್ಥರು.

ಸಂತ್ರಸ್ತರ ಕಣ್ಣೀರು
author img

By

Published : Aug 21, 2019, 8:59 PM IST

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಭೇತ್ರಿ ಗ್ರಾಮ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿದೆ. ಅಗಸ್ಟ್ 5-12ರವರೆಗೆ ಸುರಿದ ಮಳೆಗೆ ಜಿಲ್ಲೆಯ ಜೀವನದಿ ಉಕ್ಕಿ ಹರಿದಿತ್ತು. ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಏರಿತ್ತು. ಗ್ರಾಮದಲ್ಲಿನ ಸುಮಾರು 80 ಮನೆಗಳು ಭಾಗಶಃ ಮುಳುಗಿದ್ದವು. ಕೊಡಗು-ವಿರಾಜಪೇಟೆ ಸಂಪರ್ಕಿಸುವ ಮೇಲ್ಸೇತುವೆ ಮೇಲೆ ನೀರು ಅಪಾಯದ ಮಟ್ಟ ಮೀರಿ ಹರಿದಿತ್ತು.

ಕೊಡಗಿನ ಸಂತ್ರಸ್ತರ ಕಣ್ಣೀರು..

ಗ್ರಾಮದ ತುಂಬೆಲ್ಲಾ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಪ್ರಾಣ ಉಳಿಸಿಕೊಂಡ್ರೆ ಸಾಕು ಎಂದು ಮನೆ ತೊರೆದು ನೆಂಟರ ಮನೆ ಹಾಗೂ ನಿರಾಶ್ರಿತ ಕೇಂದ್ರಗಳಿಗೆ ಹೋಗಿ ಆಶ್ರಯ ಪಡೆದಿದ್ರು. ಪರಿಣಾಮ ಸಾಕಷ್ಟು ಮನೆಗಳು ಹಾನಿಗೀಡಾದರೆ 4-5 ಮನೆಗಳು ನೆಲಸಮವಾಗಿದ್ದವು. ಇಲ್ಲಿನ ಹಿರಿಯರು ಕಂಡಂತೆ 1962ರಲ್ಲಿ ಇಂತಹ ಪ್ರವಾಹ ಸೃಷ್ಟಿಯಾಗಿತ್ತಂತೆ. ಬಿಟ್ಟರೆ ಮತ್ತೆ ಈ ವರ್ಷವೇ ಇಷ್ಟು ಪ್ರಮಾಣದ ನೀರನ್ನು ನಾವು ನೋಡಿದ್ದೆಂದು ಆಶ್ಚರ್ಯ ಪಡ್ತಾರೆ.

ಈವರೆಗೂ ಮನೆ ಬಿದ್ದಿರುವ ಜಾಗಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒಬ್ಬರು ಬಿಟ್ರೇ ಯಾರೂ ಬಂದು ನೋಡಿಲ್ಲ. ಮನೆ ತುಂಬೆಲ್ಲಾ ನೀರು ತುಂಬಿದ್ದರಿಂದ ನಮ್ಮ ತಾಯಿ ನಮ್ಮನೆಗೆ ಬಂದ್ರು. ಫ್ಯಾನ್, ಮಿಕ್ಸಿ, ಹಾಸಿಗೆ, ಹೊದಿಕೆ, ಬಟ್ಟೆ, ಅಗತ್ಯ ದಾಖಲೆಗಳು ಸೇರಿ ಎಲ್ಲವೂ ನಾಶಗೊಂಡಿವೆ. ನಾವು ಏನನ್ನೂ ಕೇಳ್ತಿಲ್ಲ. ಇದ್ದ ಒಂದು ಮನೆಯೂ ಬಿದ್ದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮನೆ ಕಟ್ಟಿಸಿಕೊಡಬೇಕು ಎಂದು ಜಸೀನಾ ಮನವಿ ಮಾಡಿದರು.

Intro:
ಕೊಡಗು: ಜಿಲ್ಲೆಯಲ್ಲಿ ಆರ್ಭಟಿಸಿ ಬೊಬ್ಬಿರಿದ ಮಳೆಯೂ ನಿಂತಿದೆ.ಪ್ರವಾಹವೂ ತಗ್ಗಿದೆ.ಆದರೆ ಪ್ರವಾಹಕ್ಕೆ ಸಿಲುಕಿದ ಕುಟುಂಬಗಳ ಕಣ್ಣೀರು ಮಾತ್ರ ನಿಂತಿಲ್ಲ.ವರುಣನ ಅಬ್ಬರಕ್ಕೆ ಪ್ರವಾಹದ ರೀತಿ ಉಕ್ಕಿ ಹರಿದಿದ್ದ ಕಾವೇರಿ ನದಿ ಪಾತ್ರದ ನಿರಾಶ್ರಿತರ ಗೋಳು ಹಾಗೂ ಮೂಲ ನೆಲೆಯನ್ನು ಸದ್ಯಕ್ಕೆ ಕಂಡುಕೊಳ್ಳಲು ಆಗದಷ್ಟು ಅವಾಂತರವನ್ನೇ ಸೃಷ್ಟಿಸಿದೆ 
ಕೊಡಗಿನಲ್ಲಿ ಸುರಿದ ಮಹಾಮಳೆ..! 

ಹೌದು...ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಭೇತ್ರಿ ಗ್ರಾಮ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿದೆ.ಆಗಸ್ಟ್ 5 ರಿಂದ 12 ರವರೆಗೆ ನಿರಂತರ ಸುರಿದ ಮಳೆಗೆ ಜಿಲ್ಲೆಯ ಜೀವನದಿ ಪ್ರವಾಹದ ರೀತಿ ಉಕ್ಕಿ ಹರಿದಿತ್ತು.ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಏರಿತ್ತು.ಗ್ರಾಮದಲ್ಲಿನ ಸುಮಾರು 80 ಮನೆಗಳು ಭಾಗಶಃ ಮುಳುಗಿದ್ದವು.ಕೊಡಗು-ವಿರಾಜಪೇಟೆ (ತಾಲೂಕು ಕೇಂದ್ರ) ಸಂಪರ್ಕಿಸುವ ಮೇಲ್ಸೇತುವೆ ಮೇಲೆ ನೀರು ಅಪಾಯದ ಮಟ್ಟ ಮೀರಿ ಹರಿದಿತ್ತು.ಅಲ್ಲದೆ ಇಡೀ ಗ್ರಾಮಸ್ಥರನ್ನೇ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿತ್ತು. 

ಗ್ರಾಮದ ತುಂಬೆಲ್ಲಾ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಪ್ರಾಣ ಉಳಿಸಿಕೊಂಡ್ರೆ ಸಾಕು.ಆ ಮೇಲೆ ನೋಡಿದ್ರಾಯ್ತು...
ಎಂದು ಮನೆ ತೊರೆದು ನೆಂಟರು, ಸಂಬಂಧಿಕರು ಹಾಗೂ ನಿರಾಶ್ರಿತ ಕೇಂದ್ರಗಳಿಗೆ ಹೋಗಿ ಆಶ್ರಯ ಪಡೆದಿದ್ರು. ಮಳೆ ಕಡಿಮೆಯಾಗದೆ ಮತ್ತು ನಾಲ್ಕೈದು ದಿನಗಳು ಗೋಡೆ ಎತ್ತರಕ್ಕೆ ನೀರು ನಿಂತ ಪರಿಣಾಮ ಸಾಕಷ್ಟು ಮನೆಗಳು ಹಾನಿಗೀಡಾದರೆ ನಾಲ್ಕೈದು ಮನೆಗಳು ನೆಲಸಮವಾಗಿದ್ದವು.ಇಲ್ಲಿನ ಹಿರಿಯರು ಕಂಡಂತೆ 1962 ರಲ್ಲಿ ಇಂತಹ ಪ್ರವಾಹದ ನೋಡಿದ್ದು ಬಿಟ್ಟರೆ ಮತ್ತೆ ಈ ವರ್ಷವೇ ಇಷ್ಟು ಪ್ರಮಾಣದ ನೀರನ್ನು ನಾವು ನೋಡಿದ್ದೆಂದು ಆಶ್ಚರ್ಯ ಪಡ್ತಾರೆ. 

ಕಾವೇರಿ ನದಿ ಮೈದುಂಬಿ ಹರಿದ ಪರಿಣಾಮ ಗ್ರಾಮದಲ್ಲಿ ಎಲ್ಲರೂ ಸಂಕಷ್ಟ ಅನುಭವಿಸಬೇಕಾಯಿತು.ಹಲವು ದಿನಗಳು ನೀರು‌ ನಿಂತಿದ್ದರಿಂದ ಮನೆ ಸಂಪೂರ್ಣ ಬಿದ್ದಿದೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿವೆ.‌ ಏನು ಮಾಡಬೇಕು ಅಂತಾನೆ ತಿಳಿತ್ತಿಲ್ಲ.ನಾನು ಯಾವ ರಾಜಕೀಯ ನಾಯಕರನ್ನಾಗಲೀ ಅಥವಾ ಸರ್ಕಾರವನ್ನಾಗಲೀ ದೂಷಿಸಲು ಹೋಗಲ್ಲ. ನಮಗೆ ನೆಮ್ಮದಿಯಿಂದ ಇರೋಕೆ ಒಂದು ಶಾಶ್ವತ ನೆಲೆ ಬೇಕು ಅಂತಾ ಭಾವುಕರಾಗಿ ಮನವಿ ಮಾಡ್ತಾರೆ ಸ್ಥಳೀಯ ನಿವಾಸಿ ರಾಜು. 

ಬೈಟ್-1 ರಾಜು, ಸ್ಥಳೀಯ ನಿವಾಸಿ

ಇದುವರೆಗೂ ಮನೆ ಬಿದ್ದಿರೊ ಜಾಗಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಬ್ಬರು ಬಿಟ್ರೆ ಯಾರು ಬಂದು ನೋಡಿಲ್ಲ ನೋಡಿ.ಮನೆ ತುಂಬೆಲ್ಲಾ ನೀರು ತುಂಬಿದ್ದರಿಂದ ನಮ್ಮ ತಾಯಿ ನಮ್ಮನೆಗೆ ಬಂದ್ರು. ಪ್ಯಾನ್, ಮಿಕ್ಸಿ, ಹಾಸಿಗೆ, ಹೊದಿಕೆ, ಬಟ್ಟೆ, ಅಗತ್ಯ ದಾಖಲೆಗಳು...ಹೀಗೆ ಎಲ್ಲವೂ ಮಣ್ಣು ಸೇರಿವೆ. ನಾವು ಏನನ್ನೂ ಕೇಳ್ತಿಲ್ಲ. ಇದ್ದ ಒಂದು ಮನೆಯೂ ಬಿದ್ದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮನೆ ಕಟ್ಟಿಸಿಕೊಡಬೇಕು ಎನ್ನುತ್ತಾರೆ ಜಸೀನಾ. 

( ಚಿಟ್-ಚಾಟ್....) 

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.