ETV Bharat / state

ತ್ರಿಶೂಲ ದೀಕ್ಷೆ, ಬಂದೂಕು ತರಬೇತಿ ವಿವಾದ.. ಶಾಲೆಯಿಂದ ಟಿಸಿ ಪಡೆದ ಮುಸ್ಲಿಂ ವಿದ್ಯಾರ್ಥಿಗಳು - arms training yo students

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಚಾರ ವಿವಾದಕ್ಕೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಶಾಲೆಯಿಂದ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಟಿಸಿ ಪಡೆದಿದ್ದಾರೆ. ಆದ್ರೆ ಸಾಯಿ ಶಂಕರ್ ಶಿಕ್ಷಣ ಸಂಸ್ಥೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲವೆಂದು ಶಾಲಾಡಳಿತ ಮಂಡಳಿ‌ ಸ್ಪಷ್ಟಪಡಿಸಿದೆ.‌

Kodagu educational Institute clears about arms training issue
ಕೊಡಗು ವಿದ್ಯಾಸಂಸ್ಥೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ವಿವಾದ
author img

By

Published : May 21, 2022, 7:13 AM IST

ಮಡಿಕೇರಿ: ಕೊಡಗಿನ ಶಾಲೆಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ನಡೆದಿದೆ ಎನ್ನಲಾದ ತರಬೇತಿ ವಿವಾದದ ವಿಚಾರದಲ್ಲಿ ಕಡೆಗೂ ಶಾಲಾ‌ ಆಡಳಿತ ಮಂಡಳಿ ಮೌನ‌ ಮುರಿದಿದೆ. ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲವೆಂದು ಶಾಲಾಡಳಿತ ಮಂಡಳಿ‌ ಸ್ಪಷ್ಟಪಡಿಸಿದೆ.‌ ಇದರ ನಡುವೆ ಮೂವರು ವಿದ್ಯಾರ್ಥಿಗಳು ಶಾಲೆಯಿಂದ ಟಿಸಿಯನ್ನು ಪಡೆದು ಬೇರೆ ಶಾಲೆಗೆ ತೆರಳಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಬಂದೂಕು ತರಬೇತಿ ನಡೆದಿಲ್ಲ ಅಂತ ಶಾಲೆಯ ಆಡಳಿತ ಮಂಡಳಿ ಸ್ಪಷ್ಪಡಿಸಿದೆ. ಅಲ್ಲದೇ ರಾಜಕೀಯ ವಿಚಾರಕ್ಕೆ ಶಾಲೆಯ ಹೆಸರನ್ನು ಎಳೆದು‌ ತರದಂತೆ ಮನವಿ ಮಾಡಿದೆ. ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಕರೆಯ ಪರಿಣಾಮ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಕೊಡಗು ವಿದ್ಯಾಸಂಸ್ಥೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ವಿವಾದ - ಪ್ರತಿಕ್ರಿಯೆ

ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಈ ವಿಚಾರ ನಮ್ಮ ಗಮನಕ್ಕೆ ಬಂದಿತ್ತು. ಶಾಲಾ ಆಡಳಿತ ವರ್ಗದವರೊಂದಿಗೆ ನಾವು ಮಾತನಾಡಿದ್ದೇವೆ. ಶಾಲೆಯಿಂದ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಟಿಸಿ ಪಡೆದು ಹೋಗಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಧಾರವಾಡ ಬಳಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಏಳು ಜನ ಸ್ಥಳದಲ್ಲೇ ದುರ್ಮರಣ

ಸಾಯಿ ಶಂಕರ್ ವಿದ್ಯಾ ಸಂಸ್ಥೆಯ‌ ಆಡಳಿತ ಮಂಡಳಿ ಅಧ್ಯಕ್ಷ ಝರು ಗಣಪತಿ ಮಾತನಾಡಿ, ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಮೂವರು ವಿದ್ಯಾರ್ಥಿಗಳು ಟಿಸಿ ಪಡೆದುಕೊಂಡು ಹೋಗಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಎಲ್ಲಾ ವರ್ಗದ ಮಕ್ಕಳಿದ್ದಾರೆ. ಯಾವುದೇ ಜಾತಿ, ಧರ್ಮ ಬೇಧ- ಭಾವವಿಲ್ಲವೆಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.