ಕೊಡಗು: ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿಯನ್ನು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ತ್ರಿಶೂಲ ಅಭ್ಯಾಸ ಮಾಡಬಾರದೆಂದು ಎಲ್ಲೂ ನಿರ್ಬಂಧವಿಲ್ಲ. ಎಸ್ಡಿಪಿಐ ಸದಸ್ಯರು ಹಾದಿ ಬೀದಿಯಲ್ಲಿ ಹೋಗುವವರು, ಅವರ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. ಎಸ್ಡಿಪಿಐ ಹಾಗೂ ಪಿಎಫ್ಐ ದೇಶಕ್ಕೆ ಮಾರಕ, ಅವುಗಳನ್ನ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಪೊನ್ನಂಪೇಟೆ ಶಿಬಿರದಲ್ಲಿ ಏರ್‌ಗನ್ ತರಬೇತಿ ಪಡೆದಿದ್ದಾರೆ. ಅದಕ್ಕೆ ಯಾವುದೇ ಲೈಸೆನ್ಸ್ ಬೇಕಾಗಿಲ್ಲ. ಸ್ವಯಂ ರಕ್ಷಣೆಗೆ ಬಂದೂಕು ತರಬೇತಿ ಅಗತ್ಯವಿದೆ, ಮೊದಲಿನಿಂದಲೂ ತರಬೇತಿ ನಡೆಯುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಇದೇ ವೇಳೆ ಮಾತನಾಡಿದ ಅವರು, ಅವರ ಚರಿತ್ರೆ ಎಲ್ಲರಿಗೂ ಗೊತ್ತಿದೆ, ಗನ್ ಹಿಡಿಯುವುದು ನಮ್ಮ ಜನ್ಮ ಸಿದ್ಧಹಕ್ಕು ಇವನ್ಯಾರು ಕೇಳುವುದಕ್ಕೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಿನಾ ಬೆಳಗೆದ್ದು ಮುಸಲ್ಮಾನರ ಪರ ಏನು ಹೇಳಿಕೆ ಕೊಡಲಿ ಎಂದು ಯೋಚಿಸುವುದೇ ಸಿದ್ದರಾಮಯ್ಯ ದಿನಚರಿ. ಸಂವಿಧಾನದ ಆಶಗಳ ಬಗ್ಗೆ ನಮಗೆ ಪಾಠ ಮಾಡಬೇಡಿ. ನಿಮ್ಮ ಆಡಳಿತದಲ್ಲಿ ಮುಸಲ್ಮಾನ ಗೂಂಡಾಗಳ ಕೇಸ್ ಹಿಂಪಡೆದಿದ್ದೀರಿ ಎಂದು ಬೋಪಯ್ಯ ಹರಿಹಾಯ್ದರು.
ಇದನ್ನೂ ಓದಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ-ಕೊರೊನಾ ಬ್ಯಾಚ್ ವಿದ್ಯಾರ್ಥಿಗಳಿಂದ ಇತರರಿಗೆ ಅನ್ಯಾಯ?