ETV Bharat / state

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಪೀಡ್ ಬ್ರೇಕರ್ ಹಾಕುವಂತೆ ಹೈಕೋರ್ಟ್ ಆದೇಶ

ಕಾಡು ಪ್ರಾಣಿಗಳ ಸುರಕ್ಷತೆ ದೃಷ್ಠಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ​ಸ್ಪೀಡ್​ ಬ್ರೇಕರ್​ ನಿರ್ಮಾಣಕ್ಕೆ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್
author img

By

Published : Mar 11, 2019, 8:05 AM IST

ಕೊಡಗು:ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿಗಳು ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಹಾಕುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

High Court
ಹೈಕೋರ್ಟ್

ಕೆಲವು ತಿಂಗಳ ಹಿಂದೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಆನೆಯೊಂದು ಮೇಯಲು ಕಾಡಿಗೆ ತೆರಳಿ ಪುನಃ ಶಿಬಿರಕ್ಕೆ ವಾಪಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ಸು ಆನೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆನೆ ಸಾವನ್ನಪ್ಪಿತ್ತು. ಇದನ್ನು ಮನಗಂಡ ಸ್ಥಳೀಯ ಮಹೇಶ್​ ಎಂಬುವರು ಮೈಸೂರಿನಿಂದ ಹುಣಸೂರು, ಪಿರಿಯಾಪಟ್ಟಣದಿಂದ ವಿರಾಜಪೇಟೆವರೆಗೆ ಇರುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನಾಗರಹೊಳೆ ಅಭಯಾರಣ್ಯ ಒಳಗೆ ಹಾದುಹೋಗುವ 11 ಕಿಲೋಮೀಟರ್ ರಸ್ತೆಯ ಪ್ರತಿ 500 ಮೀಟರ್​ಗೆ ಹಂಪ್​ಗಳ‌ನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕೇರಳದ ಗಡಿಗೆ ಹೊಂದಿರುವ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಸಾಕಷ್ಟು ಸಾರಿಗೆ ಬಸ್ಸು, ಪ್ರವಾಸಿ ವಾಹನಗಳ ಮತ್ತು ಲಾರಿಗಳು ವೇಗವಾಗಿ ಹೋಗುವ ಪರಿಣಾಮ ರಾತ್ರಿ ಹೊತ್ತಿನಲ್ಲಿ ಓಡಾಡುವ ಕಾಡು ಪ್ರಾಣಿಗಳು ವಾಹನಗಳ ಹೆಡ್​ಲೈಟ್ ಬೆಳಕಿನಲ್ಲಿ ದಿಕ್ಕು ಕಾಣದೆ ಅಪಘಾತಕ್ಕೆ ಸಿಲುಕಿ ಸಾವನಪ್ಪುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧಿಸಿದಂತೆ ಇಲ್ಲಿಯೂ ಅದೇ ಕಾನೂನನ್ನು ತರುವಂತೆ ಮನವಿ ಸಲ್ಲಿಸಲಾಗಿತ್ತು.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ವನ್ಯಜೀವಿಗೂ ತೊಂದರೆ ಆಗದ ರೀತಿಯಲ್ಲಿ ಈ ತೀರ್ಪು ನೀಡಲಾಗಿದೆ. ಹಂಪ್​ಗಳ ನಿರ್ಮಾಣ ಮಾಡಲು 50 ಸ್ಥಳಗಳನ್ನು ಗುರುತಿಸಲಾಗಿದೆ. ಇನ್ನು 10 ದಿನಗಳಲ್ಲಿ ಈ ಕಾರ್ಯ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

Intro:ಈ ಸುದ್ದಿಗೆ ಫೈಲ್ ಹೈಕೋರ್ಟ್ ವಿಶ್ವಲ್ಸ್ ಅಥವಾ ಪೋಟೋ ಬಳಸಿಕೊಳ್ಳಿ.

ಕೊಡಗು: ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿ ಗಳು ಅಪಘಾತಕ್ಕೆ ಸಿಲುಕಿ ಸಾವನಪ್ಪುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಹಾಕುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಸ್ಥಳೀಯರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮನವಿ ಆದರಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. Body:ಕೆಲವು ತಿಂಗಳ ಹಿಂದೆ ಮತ್ತಿಗೋಡು ಸಾಕಾನೆ ಶಿಬಿರದ ದಸರಾ ಆನೆ ಮೇಯಲು ಕಾಡಿಗೆ ತೆರಳಿ ಮತ್ತೆ ಶಿಬಿರಕ್ಕೆ ವಾಪ್ಸಾಗುತ್ತಿದಂತೆ ವೇಗವಾಗಿ ಬಂದ ಕೇರಳ ಮೂಲದ ಪ್ರವಾಸಿ ಬಸ್ಸು ಆನೆಗೆ ಡಿಕ್ಕಿ ಹೊಡೆದು ರಾಮುವಿನ ಸಾವಿಗೆ ಕಾರಣವಾದ ಬೆನ್ನಲ್ಲೇ, ಸ್ಥಳೀಯ ರಾದ ಮಹೇಶ ಎಂಬುವವರು ಮೈಸೂರಿನಿಂದ ಹುಣಸೂರು ,ಪಿರಿಯಾಪಟ್ಟಣ ದಿಂದ ವಿರಾಜಪೇಟೆ ವರೆಗೆ ಇರುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿ ಅಪಘಾತಕ್ಕೆ ಸಿಲುಕಿ ಸಾವನಪ್ಪುತ್ತಿರುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನಾಗರಹೊಳೆ ಅಭಯಾರಣ್ಯ ಒಳಗೆ ಹಾದು ಹೋಗುವ 11 ಕಿಲೋಮೀಟರ್ ರಸ್ತೆಯ ಪ್ರತೀ 500 ಮೀಟರ್ ಗೆ ಹಂಪ್ ಗಳ‌ನ್ನು ನಿರ್ಮಾಣ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ಕೇರಳದ ಗಡಿಗೆ ಹೊಂದಿರುವ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಸಾಕಷ್ಟು ಸಾರಿಗೆ ಬಸ್ಸು, ಪ್ರವಾಸಿ ವಾಹನಗಳ ಮತ್ತು ಲಾರಿಗಳು ವೇಗವಾಗಿ ಹೋಗುವ ಪರಿಣಾಮ ರಾತ್ರಿ ಹೊತ್ತಿನಲ್ಲಿ ಓಡಾಡುವ ಕಾಡು ಪ್ರಾಣಿಗಳು ವಾಹನಗಳ ಹೆಡ್ ಲೈಟ್ ಬೆಳಕಿನಲ್ಲಿ ದಿಕ್ಕು ಕಾಣದೆ ರಸ್ತೆ ಮದ್ಯದಲ್ಲಿ ನಿಂತುಬಿಡುವ ಹಿನ್ನೆಲೆಯಲ್ಲಿ ಅಪಘಾತಕ್ಕೆ ಸಿಲುಕಿ ಸಾವನಪ್ಪುತ್ತಿರುವ ಸಾಕಷ್ಟು ಉದಾಹರಣೆ ಇದೆ. ಈಗಾಗಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿದಂತೆ ಇಲ್ಲಿಯೂಅದೇ ಕಾನೂನನ್ನು ತರುವಂತೆ ಮನವಿ ಸಲ್ಲಿಸಲಾಯಿತು. Conclusion:ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಾಹನ ಸಂಚಾರಕೆ ಅಡ್ಡಿ ಆಗದಂತೆ, ವನ್ಯಜೀವಿಗೂ ತೊಂದರೆ ಆಗದ ರೀತಿಯಲ್ಲಿ ಈ ತೀರ್ಪು ನೀಡಲಾಗಿದ್ದು ಈಗಾಗಲೇ ಹಂಪ್ ಗಳ ನಿರ್ಮಾಣ ಮಾಡಲು 50 ಸ್ಥಳ ಗುರುತು ಮಾಡಲಾಗಿದೆ. ಇನ್ನು 10 ದಿನಗಳಲ್ಲಿ ಈ ಕಾರ್ಯ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.