ಕೊಡಗು : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಬಾರಿ ಅವಾಂತರ ಸೃಷ್ಟಿಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಭಾರಿ ಮಳೆಯಾಗುತ್ತಿದ್ದು ಇದೇ ಮೊದಲ ಬಾರಿಗೆ ಭೂ ಕುಸಿತ ಉಂಟಾಗಿದೆ. ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಕಾಫಿ ತೋಟದ ನಡುವೆ ಭೂ ಕುಸಿತ ಉಂಟಾಗಿದ್ದು, ವೆಂಕಟೇಶ್ ಎಂಬವರಿಗೆ ಸೇರಿದ ಕಾಫಿ ತೋಟ ನೀರಿನಲ್ಲಿ ಕೊಚ್ಚಿಹೋಗಿದೆ.
ನಿನ್ನೆಯು ಇದೇ ಭಾಗದ ಹರಪಳ್ಳಿ ಎಂಬಲ್ಲಿ ಭೂಕುಸಿತ ಉಂಟಾಗಿತ್ತು.ಜೊತೆಗೆ ಮಡಿಕೇರಿ ತಾಲೂಕಿನಲ್ಲೂ ಭೂ ಕುಸಿತ ಉಂಟಾಗಿದ್ದು, ಸ್ಥಳೀಯರಲ್ಲಿ ಭಯ ಆತಂಕ ಮನೆಮಾಡಿದೆ.
ಇದನ್ನೂ ಓದಿ : ಗುಂಡು ಹಾರಿಸಿ ಹೆಂಡತಿ ಕೊಂದ ಗಂಡ.. ಬೆಚ್ಚಿಬಿದ್ದ ಕೊಡಗು