ETV Bharat / state

ಮಡಿಕೇರಿ: ಪೊಲೀಸರು, ನಕ್ಸಲರ ನಡುವೆ ಗುಂಡಿನ ಚಕಮಕಿ; ಓರ್ವ ನಕ್ಸಲ್​ಗೆ ಗಾಯ

author img

By ETV Bharat Karnataka Team

Published : Nov 14, 2023, 11:06 AM IST

ಕೇರಳ ಅರಣ್ಯ ಪ್ರದೇಶ ವ್ಯಾಪ್ತಿಯ ಬಿರುನಾಣಿ ಸಮೀಪ ಪೊಲೀಸರು ಹಾಗೂ ನಕ್ಸಲರ ನಡುವೆ ನಿನ್ನೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ನಕ್ಸಲ್​ ಗಾಯಗೊಂಡಿದ್ದಾನೆ.

Gunfight between police and naxals
ಪೊಲೀಸರು, ನಕ್ಸಲರ ನಡುವೆ ಗುಂಡಿನ ಚಕಮಕಿ: ಓರ್ವ ನಕ್ಸಲ್​ಗೆ ಗಾಯ

ಮಡಿಕೇರಿ: ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೊಡಗಿನ ಬಿರುನಾಣಿ ಗಡಿ ಭಾಗದಲ್ಲಿ ನಕ್ಸಲ್ ನಿಗ್ರಹ ತಂಡ ಹಾಗೂ ನಕ್ಸಲರ ನಡುವೆ ಸೋಮವಾರ ಗುಂಡಿನ ಚಕಮುಕಿ ನಡೆದಿದ್ದು, ಈ ವೇಳೆ ಓರ್ವ ನಕ್ಸಲ್​ ಗಾಯಗೊಂಡಿದ್ದಾನೆ.

ಘಟನಾ ಸ್ಥಳದಲ್ಲಿ ಎರಡು ರೈಫಲ್ಸ್ ದೊರೆತಿದ್ದು, ರಕ್ತದ ಕಲೆಗಳು ಪತ್ತೆಯಾಗಿವೆ. ಗುಂಡಿನ ಚಕಮಕಿಯಲ್ಲಿ ನಕ್ಸಲ್​ವೋರ್ವ ಗಾಯಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಕ್ಸಲರ ಕಬಿನಿ ಎನ್ನುವ ತಂಡದವರಾಗಿರುವ ಸಾಧ್ಯತೆಯಿದೆ ಎಂದು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಾಯಗೊಂಡ ನಕ್ಸಲ್ ಶ್ರೀಮಂಗಳ ಕುಟ್ಟ ವ್ಯಾಪ್ತಿಯ ಆಸ್ಪತ್ರೆ ಅಥವಾ ಔಷಧ ಮಳಿಗೆಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕುಟ್ಟ ಗಡಿ ಭಾಗ ಹಾಗೂ ಅದರ ವ್ಯಾಪ್ತಿಯಲ್ಲಿ ಬಿಗಿ ನಾಕಬಂದಿ ಹಾಕಿದ್ದು, ದಿನದ 24 ಗಂಟೆ ಬಿಗಿ ಪೊಲೀಸ್ ತಪಾಸಣಾ ಕಾರ್ಯ ನಡೆಯುತ್ತಿದೆ. ರಾಜ್ಯ ನಕ್ಸಲ್ ನಿಗ್ರಹ ಪಡೆಯು ಕೂಂಬಿಂಗ್‌ ಅನ್ನು ಚುರುಕುಗೊಳಿಸಿದೆ. ಜೊತೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು, ಕುಟ್ಟ ಭಾಗಕ್ಕೆ ಭೇಟಿ ನೀಡಿದ್ದಾರೆ.

ಕೇರಳದಲ್ಲೂ ನಡೆದಿತ್ತು ಗುಂಡಿನ ಚಕಮಕಿ: ಕಳೆದ ಮಂಗಳವಾರ, ಕೇರಳದ ವೈನಾಡು ಜಿಲ್ಲೆಯ ತಳಪುಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಪಿರಿಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರ ವಿಶೇಷ ತಂಡಗಳು ಕೂಂಬಿಂಗ್ ನಡೆಸುತ್ತಿರುವಾಗ, ಚಪ್ಪರ ಕಾಲೊನಿಗೆ ಐವರ ನಕ್ಸಲರ ತಂಡ ಆಗಮಿಸಿದಾಗ ಕೇರಳ ಪೊಲೀಸರು ಅವರನ್ನು ಸುತ್ತುವರಿದರು. ಬಳಿಕ ಗುಂಡಿನ ಚಕಮಕಿ ನಡೆದು ಮೂವರು ನಕ್ಸಲರು ತಪ್ಪಿಸಿಕೊಂಡಿದ್ದು, ಇಬ್ಬರನ್ನು ಸೆರೆ ಹಿಡಿಯಲಾಗಿತ್ತು. ಕೇರಳದ ನಕ್ಸಲ್ ಮುಖಂಡ ಚಂದ್ರು ಅಲಿಯಾಸ್ ತಿರು ವೆಂದಿಗಂ ಮತ್ತು ಕರ್ನಾಟಕದ ಶೃಂಗೇರಿಯ ಬೆಳಗೂಡು ಕೂಡಿಗೆಯ ಶ್ರೀಮತಿ ಅಲಿಯಾಸ್ ಉಣ್ಣಿಮಾಯ ಅವರನ್ನು ಕೇರಳ ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದೀಗ ನಕ್ಸಲರು ಕಣ್ಣೂರು ಜಿಲ್ಲೆಯ ವ್ಯಾಪ್ತಿಯ ಕೊಡಗಿನ ಬಿರುನಾಣಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆ ಗುಂಡಿನ ಚಕಮಕಿ ಉಂಟಾಗಿದೆ. ಈ ಹಿನ್ನೆಲೆ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ರಾಮರಾಜನ್ ಅವರು, ಕುಟ್ಟ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವಹಿಸಿದ್ದಾರೆ. ಸ್ಥಳದಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಿ, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ: ಟ್ರೈನ್​ ಇಂಜಿನ್​ಗೆ ನೇತಾಡುತ್ತಲೇ ಇತ್ತು ಯುವಕನ ಮೃತದೇಹ; ಮುಂದೆ ಸಾಗುತ್ತಲೇ ಇತ್ತು ರೈಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.