ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್ನಲ್ಲಿ ಭಾರಿ ಅವ್ಯವಹಾರ ನಡೆದಿದೆ. ಸುಮಾರು 3,000ಕ್ಕೂ ಅಧಿಕ ಠೇವಣಿದಾರರಿಗೆ 7 ಕೋಟಿಗೂ ರೂ.ಗೂ ಅಧಿಕ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸೇನೆಯಿಂದ ನಿವೃತ್ತರಾಗಿ ಬಂದವರು, ಸರ್ಕಾರಿ ಕೆಲಸದಿಂದ ನಿವೃತ್ತರಾದವರು, ವಿಧವೆಯರು, ವೃದ್ಧರೂ ಸೇರಿದಂತೆ ಸಾವಿರಾರು ಮಂದಿ ತಮ್ಮ ದುಡಿಮೆಯ ಹಣವನ್ನು ಈ ಬ್ಯಾಂಕ್ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದಾರೆ. ಇವರೆಲ್ಲರಿಗೂ ಶೇಕಡ 10.5 ರಿಂದ ಶೇಡಕ 11 ರವೆರೆಗ ಬಡ್ಡಿ ನೀಡುವ ಆಮಿಷವೊಡ್ಡಲಾಗಿತ್ತು. ಆರಂಭದಲ್ಲಿ ಅಷ್ಟೇ ಪ್ರಮಾಣದ ಬಡ್ಡಿಯನ್ನೂ ನೀಡಿ ನಂಬಿಕೆ ಗಳಿಸಿದ್ದಾರೆ. ಹಾಗಾಗಿ ಜನರು ತಮ್ಮ ಸಂಪಾದನೆ ಹಣವನ್ನು ಬ್ಯಾಂಕ್ಗೆ ಸುರಿದಿದ್ದಾರೆ. ಆದ್ರೆ ನಮ್ಮ ಅರಿವಿಗೆ ಬರದಂತೆ ಬ್ಯಾಂಕ್ ಆಡಳಿತ ಮಂಡಳಿಯ ಕೆಲವರು ಒಳಗೊಳಗೆ ಗೋಲ್ಮಾಲ್ ಮಾಡಿ ಕೋಟಿ ಕೋಟಿ ಹಣ ನುಂಗಿದ್ದಾರೆ ಅಂತ ಗ್ರಾಹಕರು ಆರೋಪಿಸಿದ್ದಾರೆ.
ವಂಚನೆ:
ಈ ಅವ್ಯವಹಾರ ಕಳೆದೊಂದು ದಶಕದಿಂದಲೇ ನಡೆಯುತ್ತಿದೆ. ಆದ್ರೆ ಯಾರ ಗಮನಕ್ಕೂ ಬರದಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿತ್ತು. ಕಳೆದ ವರ್ಷ ಲಾಕ್ಡೌನ್ ಆದಾಗ ಒಮ್ಮೆಲೇ ಬ್ಯಾಂಕ್ನ ಪಿಗ್ಮಿ ಸಂಗ್ರಹ ನಿಂತು ಹೋಗುತ್ತದೆ. ಈ ಸಂದರ್ಭ ಠೇವಣಿದಾರರಿಗೆ ಬ್ಯಾಂಕ್ನಿಂದ ಬಡ್ಡಿ ಹಣ ಬರುವುದು ನಿಂತು ಹೋಗುತ್ತದೆ. ಏಕೆ ಬಡ್ಡಿ ಹಣ ನೀಡುತ್ತಿಲ್ಲ ಎಂದು ವಿಚಾರಿಸಿದಾಗ ಏನೇನೋ ಸಮಜಾಯಿಷಿ ನೀಡಿದ್ದಾರೆ. ಆಗ ಗ್ರಾಹಕರು ಠೇವಣಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ತಲೆ ತಪ್ಪಿಸಿಕೊಂಡು ಓಡಾಡಲು ಶುರುಮಾಡಿದ್ದಾರೆ. ಆಗ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಮಾಜಿ ಅಧ್ಯಕ್ಷರುಗಳು, ಸಿಇಒನೇ ವಂಚಕರೆಂದ ಗ್ರಾಹಕರು:
ಹೀಗಾಗಿ ಬ್ಯಾಂಕ್ನ ಮಾಜಿ ಅಧ್ಯಕ್ಷರು ಮತ್ತು ಸಿಇಒನೇ ವಂಚನೆಯ ಮಾಸ್ಟರ್ ಮೈಂಡ್ ಅಂತ ಗ್ರಾಹಕರು ಆರೋಪಿಸುತ್ತಿದ್ದಾರೆ. 2005 ರಿಂದ 2012 ರವರೆಗೆ ಅಧ್ಯಕ್ಷರಾಗಿದ್ದ ಎಸ್.ಹೆಚ್. ಮೊಯ್ನುದ್ದೀನ್, 2012 ರಿಂದ 2020ರವರೆಗೆ ಅಧ್ಯಕ್ಷನಾಗಿದ್ದ ಮೊಹಮ್ಮದ್ ಸುಯೇಬ್ ಅಲಿಯಾಸ್ ( ಬಾಬು) ಮತ್ತು 25 ವರ್ಷಗಳಿಂದ ಬ್ಯಾಂಕ್ ಸಿಇಒ ಆಗಿರುವ ಮುಕ್ತಾರ್ ಅಹ್ಮದ್ ಇವರುಗಳೇ ಮುಖ್ಯ ಆರೋಪಿಗಳು ಅಂತಾರೆ ಗ್ರಾಹಕರರು.
70ಕ್ಕೂ ಅಧಿಕ ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು: ದುಷ್ಕರ್ಮಿಗಳ ಕೃತ್ಯದಿಂದ ಕಣ್ಣೀರಿಟ್ಟ ರೈತ
ದಶಕಗಳ ಇತಿಹಾಸವಿರುವ ಈ ಬ್ಯಾಂಕ್ ಅನ್ನು ನಂಬಿರುವ ಗ್ರಾಹಕರು ಇದೀಗ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಗ್ರಾಹಕರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ.