ಕೊಡಗು: ಜಿಲ್ಲೆಯಲ್ಲಿ ಇಂದು ಹೊಸದಾಗಿ 4 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಮೂವರು ಆರೋಗ್ಯ ಕಾರ್ಯಕರ್ತರಿದ್ದಾರೆ. ಸೋಂಕಿತರ ಸಂಖ್ಯೆ 76 ಕ್ಕೇರಿದೆ.
ಮಡಿಕೇರಿ ಆಸ್ಪತ್ರೆಯ ವಸತಿ ಗೃಹದಲ್ಲಿದ್ದ ಮೂರ್ನಾಡುವಿನ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 49 ವರ್ಷದ ವ್ಯಕ್ತಿಗೆ, ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಸ್ಥಾನದ ಹಿಂಭಾಗ ವಾಸವಿರುವ 27 ವರ್ಷದ ವ್ಯಕ್ತಿಗೆ ಮತ್ತು ಭಗವತಿ ನಗರದ 24 ವರ್ಷದ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಜ್ವರದಿಂದ ಬಳಲುತ್ತಿದ್ದ ವಿರಾಜಪೇಟೆಯ ಶಾಂತಿನಗರದ 40 ವರ್ಷದ ವ್ಯಕ್ತಿಗೆ ಸೋಂಕು ವಕ್ಕರಿಸಿದೆ.
ಜಿಲ್ಲೆಯಲ್ಲಿ ಹೊಸದಾಗಿ 1, ಮಡಿಕೇರಿಯ ಆಸ್ಪತ್ರೆ ವಸತಿಗೃಹ 2, ಭಗವತಿ ನಗರದಲ್ಲಿ 3 ಹಾಗೂ ಮಹದೇವಪೇಟೆ 4 ಮತ್ತು ವಿರಾಜಪೇಟೆಯ ಶಾಂತಿನಗರದಲ್ಲಿ ನಿರ್ಬಂಧಿತ ವಲಯಗಳೆಂದು (ಕಂಟೈನ್ಮೆಂಟ್) ಘೋಷಿಸಲಾಗಿದೆ. 76 ಸೋಂಕಿತರ ಪೈಕಿ ಮೂವರು ಗುಣಮುಖವಾಗಿದ್ದು, 73 ಸಕ್ರಿಯ ಪ್ರಕರಣಗಳಿವೆ. ನಿಯಂತ್ರಿತ ಪ್ರದೇಶಗಳ ಸಂಖ್ಯೆ 30ಕ್ಕೆ ಏರಿವೆ.