ETV Bharat / state

ನನಗೆ ಮನೆ ಕೊಡಿ, ಇಲ್ಲವೇ ಸಾಯಲು ಅನುಮತಿ ನೀಡಿ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತೆ - kodagu flood victim

2019 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡ ನಲ್ಲಿಹುದಿಕೇರಿಯ ನಿವಾಸಿ ಶಾಂತಾ ಎಂಬುವರು ದಯಾಮರಣ ಕೋರಿ ರಾಷ್ಡ್ರಪತಿಗೆ ಪತ್ರ ಬರೆದಿದ್ದಾರೆ.

flood victim
ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತೆ
author img

By

Published : Jun 30, 2023, 1:56 PM IST

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತೆ

ಕೊಡಗು : ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ವಾಸದ ಮನೆ ಕಳೆದುಕೊಂಡು ನೂತನ ಸೂರಿಗಾಗಿ ಗೋಳಾಡಿ ಸಾಕಾದ ಸಂತ್ರಸ್ತೆಯೊಬ್ಬರು ಇದೀಗ ರಾಷ್ಟ್ರಪತಿಯವರಿಗೆ ಪತ್ರ ಬರೆಯುವ ಮೂಲಕ "ನನಗೆ ಮನೆ ಕೊಡಿ, ಇಲ್ಲವೇ ಸಾಯಲು ಅನುಮತಿ ನೀಡಿ" ಎಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಲ್ಲಿಹುದಿಕೇರಿ ಗ್ರಾಮದ ಶಾಂತಾ ಎಂಬುವರು ಜಲಪ್ರಳಯದಲ್ಲಿ ಮನೆ ಕಳೆದುಕೊಂಡು ನಾಲ್ಕು ವರ್ಷಗಳಾದರೂ ಪುನರ್ವಸತಿ ಪಡೆಯಲಾಗದೇ ಇನ್ನೂ ಪರದಾಡುತ್ತಿದ್ದಾರೆ. ಹೀಗಾಗಿ, ನಮಗೆ ಮನೆ ಕಟ್ಟಿಸಿ ಕೊಡಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಅನ್ವರ್ ಹತ್ಯೆ ಪ್ರಕರಣ : ಹಂತಕರನ್ನು ಬಂಧಿಸಿ, ಇಲ್ಲವೇ ದಯಾಮರಣ ಕೊಡಿ ಎಂದ ಕುಟುಂಬಸ್ಥರು

''ನಾನು ಕಾವೇರಿ ನದಿ ತೀರದ ಬಳಿಯ ನಲ್ಲಿಹುದಿಕೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಮಗನೊಂದಿಗೆ ವಾಸವಿದ್ದು, ಕೂಲಿ ಮತ್ತು ‌ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಆದರೆ, 2019 ರಲ್ಲಿ ಸಂಭವಿಸಿದ ಜಲ ಪ್ರಳಯದಲ್ಲಿ ಮನೆ ಸಂಪೂರ್ಣ ನೆಲಕಚ್ಚಿತ್ತು. ರಾತ್ರೋರಾತ್ರಿ ಮಳೆ ಹೆಚ್ಚಾದ ಪರಿಣಾಮ ವಿಪರೀತ ಗಾಳಿಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿತ್ತು. ಪ್ರಾಣ ಉಳಿಸಿಕೊಳ್ಳಲು ನಾನು ನನ್ನ ಮಗನ ಜೊತೆ ಮನೆಯಿಂದ ಆಶ್ರಯ ಶಿಬಿರಕ್ಕೆ ಬಂದೆವು. ಆದರೆ, ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆದರೆ, ಕಾಳಜಿ ಕೇಂದ್ರದಲ್ಲಿ ವಾಸಮಾಡಿಕೊಂಡು ಬಾಡಿಗೆ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದೆ. ಈಗ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಜೀವನ ನಡೆಸಲು ಕಷ್ಟವಾಗಿದ್ದು ಮನೆ ಕೊಡುವಂತೆ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಅಲೆದಾಡಿದ್ದೇನೆ. ಆದರೂ, ಯಾವುದೇ ಪ್ರಯೋಜವಾಗಿಲ್ಲ" ಎಂದು ಶಾಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ.. ಬಿಲ್ ಪಾವತಿಗೆ ತಾಪಂ ಇಒ ವಿಳಂಬ: ಗುತ್ತಿಗೆದಾರ ಆರೋಪ

"ಸಂತ್ರಸ್ತರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಇತರೆ ಸಚಿವರು ಹೊಸ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಮನೆಗಳು ಸಿದ್ಧವಾಗುವವರೆಗೆ ನಮ್ಮ ಬಾಡಿಗೆಯನ್ನು ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಇದ್ಯಾವುದೂ ಈವರೆಗೂ ಈಡೇರಿಲ್ಲ" ಎಂದು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು : ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ರೈತರು

''ಪತಿ ತೀರಿಹೋಗಿದ್ದು ಮಗನೊಂದಿಗೆ ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಮನೆ ಕೆಲಸ ಮಾಡಿಕೊಂಡು ಜೀವನ ದೂಡುತ್ತಿರುವೆ. ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದೆ. ಹಾಗಾಗಿ, ನನಗೆ ಮನೆ ನಿರ್ಮಿಸಲು ಸರ್ಕಾರ ಸಹಾಯ ಮಾಡಬೇಕು ಅಥವಾ ಸಾಯಲು ಅನುಮತಿ ನೀಡಬೇಕು" ಎಂದು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಸಿಗದ ಪರಿಹಾರ.. ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.