ಮಡಿಕೇರಿ(ಕೊಡಗು): ಆನೆ ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹೈಡೋಸೇಜ್ ಇಂಜೆಕ್ಷನ್ ನೀಡಿದ ಪರಿಣಾಮ 13 ವರ್ಷದ ಕಾಡಾನೆ ಮೃತಪಟ್ಟಿರುವ ಆರೋಪ ಘಟನೆ ಜಿಲ್ಲೆಯ ಚೆಯ್ಯಂಡಾಣೆ ಸಮೀಪದ ಮರಂದೋಡು ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಂದಡು ಗ್ರಾಮದ ವಿಜಯ್‌ನಂಜಪ್ಪ ಅವರ ಕಾಫಿ ತೋಟದಲ್ಲಿ ಘಟನೆ ನಡೆದಿದೆ. ದಾಂಧಲೆ ಮಾಡುತ್ತಿದ್ದ ಕಾಡಾನೆಗಳನ್ನು ಸರ್ಕಾರದ ಅನುಮತಿ ಪಡೆದು ಸೆರೆ ಹಿಡಿಯಲಾಗುತ್ತದೆ. ಅಂತೆಯೇ ಗ್ರಾಮದ ಕಾಫಿ ತೋಟದಲ್ಲಿ ದಾಳಿ ಮಾಡಿ ದಾಂಧಲೆ ಮಾಡುತ್ತಿದ್ದ ಹೆಣ್ಣಾನೆಗೆ ಅರವಳಿಕೆ ಮದ್ದು ನೀಡಿ ಮೂರು ಸಾಕಾನೆಗಳ ಸಹಾಯದಿಂದ ಸೆರೆಹಿಡಿದು ಎಳೆದುಕೊಂಡು ಹೋಗುವಾಗ ಆನೆ ಕುಸಿದುಬಿದ್ದಿದೆ.
ಈ ವೇಳೆ ಸ್ಥಳದಲ್ಲಿದ್ದ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಸ್ಥಳೀಯರು ಹಾಗೂ ಪ್ರಾಣಿಪ್ರಿಯರು ಅರಣ್ಯ ಇಲಾಖೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಹಾರ ಅರಸಿ ನಾಡಿಗೆ ಬರುವ ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮತ್ತು ಹೊಂಡಗಳಿಗೆ ಬಿದ್ದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪುತ್ತವೆ. ಇಲ್ಲವೇ ಅರಣ್ಯ ಇಲಾಖೆಯವರ ಬೇಜವಾಬ್ದಾರಿ ವರ್ತನೆಗೆ ಸಿಲುಕಿ ಮೃತಪಡುತ್ತವೆ.
ಓದಿ: ಪಠ್ಯದಿಂದ ಅಧ್ಯಾಯ ಕೈಬಿಡಿ ಎನ್ನುವುದು ಕಾಂಗ್ರೆಸ್‌ನಿಂದ ಉಪಕೃತರಾದ ಕೆಲವರ ನಾಟಕ: ಪ್ರತಾಪ್ ಸಿಂಹ