ETV Bharat / state

ಕೊಡವರಿಗೆ ಕೊರೊನಾ ಭೀತಿಯ ನಡುವೆ ಕಾಡಾನೆಗಳ ಕಾಟ... ಬಾಳೆ ಬೆಳೆ ಸಂಪೂರ್ಣ ನಾಶ

ಕೊಡವರಿಗೆ ಕೊರೊನಾ ಕಾಟ ಒಂದು ಕಡೆಯಾದ್ರೆ ಮತ್ತೊಂದೆಡೆ ಕಾಡಾನೆಗಳ ಕಾಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕೈಗೆ ಬಂದ ಬೆಳೆ ಆನೆಗಳ ಹಾವಳಿಯಿಂದ ನಾಶವಾಗಿದ್ದು, ರೈತರ ಸ್ಥಿತಿ ಅತಂತ್ರವಾಗಿದೆ.

elephant-destroyed-banana-crop-in-virajapete
ವಿರಾಜಪೇಟೆ ಕಾಡಾನೆ ದಾಳಿ
author img

By

Published : Apr 26, 2020, 10:41 AM IST

ವಿರಾಜಪೇಟೆ/ಕೊಡಗು: ಲಾಕ್‌ಡೌನ್ ನಡುವೆ ಕಾಡಾನೆಗಳ ಹಾವಳಿಯಿಂದ ರೈತರು ಮತ್ತಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಕಾಡಾನೆಗಳ ದಾಳಿಗೆ ಬಾಳೆ ನಾಶವಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಹರಿಶ್ಚಂದ್ರಪುರದಲ್ಲಿ ನಡೆದಿದೆ.

ಹರಿಶ್ಚಂದ್ರಪುರ‌ದ ರೈತ ಕೆ‌ .ವೈ. ರಾಜೀತ್‌ಗೆ ಸೇರಿದ ಬಾಳೆ ತೋಟವನ್ನು ಪುಂಡಾನೆಗಳು ಮನಸ್ಸೋಇಚ್ಛೆ ತುಳಿದು ಬೆಳೆ ನಾಶಗೊಳಿಸಿವೆ.‌ ಬೆಳಗ್ಗೆ ಬಾಳೆ ತೋಟಕ್ಕೆ ದಾಳಿ ಇಟ್ಟ ಕಾಡಾನೆಗಳು ಕಟಾವಿಗೆ ಬಂದಿದ್ದ ಫಸಲನ್ನು ತಿಂದು ನೆಲಕ್ಕುರುಳಿಸಿವೆ.

ಕೊಡವರಿಗೆ ಕೊರೊನಾ ಭೀತಿಯ ಜೊತೆ ಕಾಡಾನೆಗಳ ಉಪಟಳ

ಮೊದಲೇ ಕೊರೊನಾ ಭೀತಿಯ ಮಧ್ಯೆ ರೈತರು ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರಿದಾಡುತ್ತಿರುವ ಪರಿಸ್ಥಿತಿಯಲ್ಲಿ ‌ಕಾಡಾನೆಗಳು ಉಪಟಳದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.