ETV Bharat / state

ಕುಶಾಲನಗರದಲ್ಲಿ ಕೊರೊನಾ ಸೋಂಕಿಗೆ ವೃದ್ಧೆ ಬಲಿ - ಕಂಟೇನ್​ಮೆಂಟ್ ವಲಯ

ಕೊರೊನಾ ‌ಸೋಂಕಿನಿಂದ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಸರ್ಕಾರದ ಮಾರ್ಗಸೂಚಿ ಅನುಸಾರ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ‌ ಜಿಲ್ಲಾಡಳಿತ ತಿಳಿಸಿದೆ.

Elderly death from corona infection
ಕೊರೊನಾ ಸೋಂಕಿಗೆ ಬಲಿಯಾದ ವೃದ್ಧೆ
author img

By

Published : Jul 16, 2020, 8:25 PM IST

ಕುಶಾಲನಗರ/ಕೊಡಗು: ಕಂಟೈನ್​ಮೆಂಟ್ ವಲಯದಲ್ಲಿ ಕೊರೊನಾ ‌ಸೋಂಕಿನಿಂದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪದ ತೊರೆನೂರಿನಲ್ಲಿ‌ ನಡೆದಿದೆ.‌

ಬೆಳಗ್ಗೆ ಸೋಮವಾರಪೇಟೆ ತಾಲೂಕಿನ ತೊರೆನೂರು‌ ಗ್ರಾಮದ ನಿಯಂತ್ರಿತ ಪ್ರದೇಶದಲ್ಲಿ ವಾಸಿಸುತ್ತಿದ್ದ 90 ವರ್ಷದ ವೃದ್ಧೆ ಮೃತಪಟ್ಟಿದ್ದು, ವಿಷಯ ತಿಳಿದ ಕೂಡಲೇ ವೈದ್ಯಕೀಯ ಸಿಬ್ಬಂದಿ ತೆರಳಿ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಇವರಿಗೆ ಬೇರೆ ರೋಗದ ಲಕ್ಷಣಗಳು ಇರಲಿಲ್ಲ.

ಮೃತರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಇದನ್ನು ಕೋವಿಡ್ ಸಂಬಂಧಿತ ಮರಣ ಎಂದು ತೀರ್ಮಾನಿಸಿ, ಸರ್ಕಾರದ ಮಾರ್ಗಸೂಚಿ ಅನುಸಾರ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ‌ ಜಿಲ್ಲಾಡಳಿತ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.