ETV Bharat / state

ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ.. ಆತಂಕದಲ್ಲಿ ಜನ

ಕೊಡಗು ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಭೂ ಕಂಪನದ ಅನುಭವಾಗಿದೆ. ಇದರಿಂದ ಜನ ಹೆದರಿಕೆಯಿಂದಲೇ ಜೀವಿಸುವಂತಾಗಿದೆ. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

bhhomi kamppana
ಭೂಕಂಪನ
author img

By

Published : Jun 25, 2022, 7:51 PM IST

ಕೊಡಗು: ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಎರಡು ದಿನದ ಹಿಂದೆ ಅಂದರೆ ಜೂ.23 ನೇ ತಾರೀಖಿನಂದು ಕೊಡಗು, ಹಾಸನ ಗಡಿಭಾಗಗಳು ಹಾಗೂ ಸೋಮವಾರಪೇಟೆಯ, ನೇಗಳೆ, ರೆಂಜರ್ ಬ್ಲಾಕ್​ನಲ್ಲಿ ಭೂ ಕಂಪನವಾಗಿತ್ತು. ಇಂದು ಮತ್ತೆ ಕೂಡ ಭೂಕಂಪನದ ಸಂಭವಿಸಿದೆ. ಇದು ಜಿಲ್ಲೆಯ ಜನತೆಯನ್ನ ಬೆಚ್ಚಿಬೀಳಿಸಿದೆ.

ಶನಿವಾರ ಬೆಳಗ್ಗೆ 9.15 ರ ಸುಮಾರಿಗೆ ಜಿಲ್ಲೆಯ ಕರಿಕೆ, ಪೆರಾಜೆ, ಸಂಪಾಜೆ, ಸುತ್ತಮುತ್ತ ಭೂಮಿ ಕಂಪಿಸಿದೆ. ಅಲ್ಲದೆ ಮನೆಯಲ್ಲಿದ್ದ ಪಾತ್ರೆಗಳು ಕೂಡ ಕಂಪಕದ ತೀವ್ರತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆಯಂತೆ. ತೋಟದ ಕೆಲಸಕ್ಕೆ ಹೋದವರಿಗೂ ಇದರ ಅನುಭವವಾಗಿದೆ. ಅಲ್ಲದೆ ದಕ್ಷಿಣ ಜಿಲ್ಲೆಯ ಗೂನಡ್ಕದಲ್ಲೂ 3/4 ಸೆಕೆಂಡ್ ಕಂಪನವಾಗಿದ್ದು, ಗ್ರಾಮ ಪಂಚಾಯತ್​ ಸದಸ್ಯ ಅಬುಶಾಲಿ ಮನೆ ಕೂಡ ಬಿರುಕು ಬಿಟ್ಟಿದೆ. ಜಿಲ್ಲೆಯಲ್ಲಿ 3.4 ತೀವ್ರತೆಯಲ್ಲಿ ಕಂಪನವಾಗಿರೋದು ದೃಢಪಟ್ಟಿದೆ‌.

ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಭೂಕಂಪನದ ಅನುಭವ

2018ರ ಘಟನೆ ನೆನಪಿಸಿದ ಭೂಕಂಪ: ಜಿಲ್ಲೆಯಲ್ಲಿ 2018 ರಲ್ಲೂ ಕೂಡ ಬೆಟ್ಟ ಗುಡ್ಡಗಳು ಕುಸಿತಕ್ಕೂ ಮೊದಲೇ ಕೊಡಗಿನ ಬಹುತೇಕ ಭಾಗದಲ್ಲೂ ಭೂಮಿ ಕಂಪಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಜಲ ಪ್ರಳಯವಾಗಿ ಬೆಟ್ಟ ಗುಡ್ಡಗಳು ಕುಸಿದು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು. ಈ ಭೂ ಕಂಪನದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದು, 2018ರ ಘಟನೆ ಮರುಕಳಿಸಲಿದೆಯೇ ಎಂದು ಭಯ ಬಿದ್ದಿದ್ದಾರೆ.

ಮುಂಜಾಗ್ರತಾ ಕ್ರಮ ವಹಿಸಿದ ಜಿಲ್ಲಾಡಳಿತ: ಭೂಮಿ ಎರಡನೇ ಬಾರಿಗೆ ಕಂಪಿಸಿದ್ದು, ಅಪಾಯದ ಮುನ್ಸೂಚನೆ ತೋರುತ್ತಿದೆ. ಜಿಲ್ಲಾಡಳಿತ ಈ ಮೊದಲೇ 43 ಕಡೆ ಜಲವೃತ ಪ್ರದೇಶ ಮತ್ತು 39 ಕಡೆ ಗುಡ್ಡ ಕುಸಿತದ ಪ್ರದೇಶಗಳನ್ನು ಗುರುತು ಮಾಡಿದೆ. ಅಲ್ಲದೇ ಅಲ್ಲಿ ವಾಸವಿರುವ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನೋಟಿಸ್ ಜಾರಿ ಮಾಡಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಎನ್​​ಡಿಆರ್​ಎಫ್ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ. ಇಷ್ಟೆಲ್ಲ ಅವಾಂತರದ ನಡುವೆ ಜಿಲ್ಲೆಯ ಜನರು ಮಾತ್ರ ಭೂ ಕಂಪನದಿಂದ ಜೀವ ಭಯದಲ್ಲಿ ಬದುಕುವಂತ ಸ್ಥಿತಿ ಇದೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಸೇರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.