ETV Bharat / state

ಅನವಶ್ಯಕವಾಗಿ ಹೊರಗೆ ಬರಬೇಡಿ: ನಟಿ ಹರ್ಷಿಕಾ ಪೂಣಚ್ಚ, ಭುವನ್ ಮನವಿ

author img

By

Published : Mar 30, 2020, 9:55 PM IST

ಕೊರೊನಾ ಸೋಂಕನ್ನು ಸಂಘಟಿತರಾಗಿ ತಡೆಯಬೇಕಿದೆ. ಯಾರೂ ಅನವಶ್ಯಕವಾಗಿ ಹೊರಗೆ ಬರಬೇಡಿ ನಟಿ ಎಂದು ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಮನವಿ ಮಾಡಿದ್ದಾರೆ.

Actor Harshika Pooncha and  Bhuvan  request
ಅನವಶ್ಯಕವಾಗಿ ಹೊರಗೆ ಬರಬೇಡಿ: ನಟಿ ಹರ್ಷಿಕಾ ಪೂಣಚ್ಚ, ಭುವನ್ ಮನವಿ

ವಿರಾಜಪೇಟೆ/ ಕೊಡಗು: ಜಗತ್ತಿನಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಹರಡದಂತೆ ತಡೆಯಲು ದೇಶದಾದ್ಯಂತ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಇಂತಹ ಜಾಗತಿಕ ಮಾರಣಾಂತಿಕ ಸೋಂಕನ್ನು ಸಂಘಟಿತರಾಗಿ ತಡೆಯಬೇಕಿದೆ. ಯಾರೂ ಅನವಶ್ಯಕವಾಗಿ ಹೊರಗೆ ಬರಬೇಡಿ ನಟಿ ಎಂದು ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಮನವಿ ಮಾಡಿದ್ದಾರೆ.

ವಿರಾಜಪೇಟೆ ತಾಲೂಕಿನಲ್ಲಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಲಾಕ್‌ಡೌನ್ ದಿನಗಳನ್ನು ಜಾಲಿಯಾಗಿ ಕಳೆಯುತ್ತಿದ್ದಾರೆ. ಮನೆಯ ಸದಸ್ಯರೊಂದಿಗೆ ಕಾರ್ಡ್ಸ್ ಆಡುತ್ತಾ, ತಮ್ಮ ನೆಚ್ವಿನ ಪ್ರಾಣಿಗಳೊಂದಿಗೆ ಸುತ್ತಾಡುತ್ತಾ ಹಾಗೆಯೇ ಫಿಟ್‌ನೆಸ್‌ಗೆ ಒಂದಿಷ್ಟು ವರ್ಕೌಟ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಹರ್ಷಿಕಾ, ಸಾಕಷ್ಟು ಹಳ್ಳಿಗಳಲ್ಲಿ ಜನರೇ ಕೊರೊನಾ ವಿರುದ್ಧ ದಿಗ್ಭಂದನ ಹಾಕಿಕೊಂಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಅವುಗಳನ್ನು ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದರು.

ಇನ್ನು ನಟ ಭುವನ್​ ಮಾತನಾಡಿ ಕೊರೊನಾ ವೈರಸ್​ನಿಂದ ಈಗಾಗಲೇ ಸಾಕಷ್ಟು ಸಾವುಗಳು ಸಂಭವಿಸಿವೆ. ವೈರಸ್​​ ಹರಡದಂತೆ ತಡೆಯಲು ದೇಶದಾದ್ಯಂತ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಯಾರೂ ಅನವಶ್ಯಕವಾಗಿ ಹೊರಗೆ ಹೋಗ ಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.