ETV Bharat / state

ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ : ಆಸ್ಪತ್ರೆ ಸೇರಿದ ಪುಟಾಣಿಗಳು

ಇದೇ ನಾಯಿ ಇಂದು ಬೆಳಗ್ಗೆ ಕಕ್ಕೆಹೊಳೆ ಸಮೀಪ ಇಬ್ಬರಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ಇಬ್ಬರಿಗೆ ಸೇರಿದಂತೆ ಒಟ್ಟು ಆರು ಮಂದಿಗೆ ಕಚ್ಚಿದೆ. ನಾಲ್ಕೈದು ನಾಯಿಗಳಿಗೂ ಕಚ್ಚಿದೆ ಎನ್ನಲಾಗಿದೆ..

ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ
ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ
author img

By

Published : Nov 30, 2021, 9:09 PM IST

ಕೊಡಗು : ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಪುಟಾಣಿಗಳಿಬ್ಬರು ಗಾಯಗೊಂಡಿರುವ ಘಟನೆ ಮಡಕೇರಿ ಪಟ್ಟಣದಲ್ಲಿ ನಡೆದಿದೆ.

ಇಂದು ಬೆಳಗ್ಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ವೇಳೆ, ನಾಯಿಯೊಂದು ಏಕಾಏಕಿ ಮಕ್ಕಳ ಮೇಲೆ ದಾಳಿ ನಡೆಸಿ ಸಿಕ್ಕ ಸಿಕ್ಕವರನ್ನು ಕಚ್ಚಲಾರಂಭಿಸಿತು.

ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ವಿಚಲಿತರಾಗಿದ್ದಾರೆ. 3ನೇ ತರಗತಿಯ ಕಿಶನ್ ಹಾಗೂ ಒಂದನೇ ತರಗತಿಯ ಧ್ವನಿ ಎಂಬ ವಿದ್ಯಾರ್ಥಿಗಳ ಕಾಲು ಹಾಗೂ ತೊಡೆಯ ಭಾಗಕ್ಕೆ ನಾಯಿ ಕಚ್ಚಿದೆ.

ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ..

ನಾಯಿ ದಾಳಿಗೆ ಮಕ್ಕಳನ್ನು ರಕ್ಷಿಸಲು ಶಿಕ್ಷಕಿಯರು ಹರಸಾಹಸ ಪಡಬೇಕಾಯಿತು. ಗಾಯಗೊಂಡ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಮಿಲ್ಡ್ರೆಡ್ ಗೊನ್ಸಾಲ್ವೆಸ್ ಪೊಲೀಸ್ ಹಾಗೂ ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದಾರೆ.

ಇದೇ ನಾಯಿ ಇಂದು ಬೆಳಗ್ಗೆ ಕಕ್ಕೆಹೊಳೆ ಸಮೀಪ ಇಬ್ಬರಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ಇಬ್ಬರಿಗೆ ಸೇರಿದಂತೆ ಒಟ್ಟು ಆರು ಮಂದಿಗೆ ಕಚ್ಚಿದೆ. ನಾಲ್ಕೈದು ನಾಯಿಗಳಿಗೂ ಕಚ್ಚಿದೆ ಎನ್ನಲಾಗಿದೆ.

ಪಟ್ಟಣ ಪಂಚಾಯತ್‌ ಅಧ್ಯಕ್ಷ ಚಂದ್ರು, ಸದಸ್ಯರಾದ ಶೀಲಾ ಡಿಸೋಜ, ಮಹೇಶ್ ಹಾಗೂ ಎಸ್.ಮಹೇಶ್ ಮುಖ್ಯಾಧಿಕಾರಿ ನಾಚಪ್ಪ ಆಸ್ಪತ್ರೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಪಟ್ಟಣದಲ್ಲಿ ನಾಯಿಗಳ ಹಾವಳಿ ಮಿತಿಮೀರಿದೆ. ಪಟ್ಟಣ ಪಂಚಾಯತ್‌ನ ನಿರ್ಲಕ್ಷ್ಯತನದಿಂದ ನಾಯಿಗಳು ದಾಳಿ ಮಾಡುತ್ತಿವೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.