ಕೊಡಗು: ಹಣಕ್ಕಾಗಿ ಬೇಡಿಗೆ ಇಟ್ಟ ಆರೋಪದಡಿ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಕೃಷ್ಣ ಎಂಬುವವರನ್ನು ಕುಶಾಲನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧಿನಕ್ಕೆ ಒಪ್ಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ರಾಮೇಗೌಡ ಅವರ ಟೆಂಡರ್ ಕಾಮಗಾರಿಗಳನ್ನು ಕೃಷ್ಣ ಪ್ರಶ್ನಿಸುತ್ತಿದ್ದ. ನೀವು ಕಳಪೆ ಕಾಮಗಾರಿ ನಡೆಸುತ್ತಿದ್ದು, ಇಂತಿಷ್ಟು ಹಣ ಕೊಡುವಂತೆ ಬೇಡಿಕೆ ಇಡುತ್ತಿದ್ದ ಎಂದು ದೂರಲಾಗಿದೆ. ಈ ದೂರಿನ ಮೇರೆಗೆ ಇದೀಗ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.