ETV Bharat / state

ತಲಕಾವೇರಿಯಲ್ಲಿ ನಾಳೆ ಪೂಜೆ: ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

author img

By

Published : Aug 13, 2020, 5:42 PM IST

ತಲಕಾವೇರಿ ದೇವಾಲಯಕ್ಕೆ ಸಂಪರ್ಕ ಸಲ್ಪಿಸುವ ರಸ್ತೆ ಮೇಲಿನ ಮಣ್ಣಿನ ರಾಶಿ ಹಾಗೂ ಕೆಸರನ್ನು ನಾಳೆಯೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಸೂಚಿಸಿದ್ದಾರೆ.

District collector visit to Talakaveri
ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ತಲಕಾವೇರಿ‌(ಕೊಡಗು): ತಲಕಾವೇರಿ ದೇವಾಲಯದಲ್ಲಿ ನಾಳೆಯಿಂದ ಪೂಜೆ ನೆರವೇರುವುದರಿಂದ ದೇವಾಲಯದಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರದ ಹಿಂದೆ ಸುರಿದ ಧಾರಾಕಾರ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಸಾಲಿನ ಗಜರಾಜ ಗಿರಿಬೆಟ್ಟ ಕುಸಿದಿತ್ತು. ಇಲ್ಲಿ ಪೂಜಿಸುತ್ತಿದ್ದ ಪ್ರಧಾನ ಅರ್ಚಕರ ಕುಟುಂಬವೇ ಕಣ್ಮರೆ ಆಗಿತ್ತು. ವಾರದಿಂದ ತಲಕಾವೇರಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ. ನಾಳೆಯಿಂದ ಪೂಜಾ ಕೈಂಕರ್ಯ ಆರಂಭವಾಗಲಿದ್ದು, ಜಿಲ್ಲಾಧಿಕಾರಿ ಪರಿಶೀಲಿಸಿದರು.

ದೇವಾಲಯಕ್ಕೆ ಸಂಪರ್ಕ ಸಲ್ಪಿಸುವ ರಸ್ತೆ ಮೇಲೆಯೇ ಮಣ್ಣಿನ ರಾಶಿ ಹಾಗೂ ಕೆಸರನ್ನು ನಾಳೆಯೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಿಂದ ಇದೇ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ತಲಕಾವೇರಿಯಲ್ಲಿ ಪೂಜೆ ಸ್ಥಗಿತಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.