ಕೊಡಗು: ಕೊಡವ ಸಮುದಾಯದ ಪ್ರಬಲ ನಾಯಕ ಎಂ.ಪಿ.ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ನೀಡುವಂತೆ ಕೊಡವ ಸಮಾಜ ಒಕ್ಕೂಟದ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಆಗ್ರಹಿಸಿದ್ದಾರೆ.
ಈ ಹಿಂದೆ 10 ತಿಂಗಳು ಉಸ್ತುವಾರಿ ಸಚಿವರಾಗಿದ್ದ ರಂಜನ್ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಉತ್ತಮವಾಗಿ ಜನರ ಸೇವೆ ಮಾಡಿದ್ದಾರೆ. ಕೊಡಗಿನಿಂದ 6 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು ಸಾಧಿಸಿದ್ದಾರೆ. ಜಲಪ್ರಳಯ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗಿನವರೇ ಉಸ್ತುವಾರಿ ಸಚಿವರು ಆಗುವುದು ಸೂಕ್ತ. ಆದ್ದರಿಂದ ಅಪ್ಪಚ್ಚು ರಂಜನ್‌ಗೆ ಮಂತ್ರಿ ಪಟ್ಟ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಸಮಾಜದ ಶೇ. 95ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ. ಪ್ರತಾಪ್ ಸಿಂಹ ಸಂಸದರಾಗಿ ಗೆಲುವು ಸಾಧಿಸಲು ಕೊಡಗಿನ ಮತಗಳೇ ಕಾರಣವಾಗಿವೆ. ಹೀಗಿದ್ದರೂ ಕೊಡವ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ನಮಗೆ ಹೊರ ಜಿಲ್ಲೆಯ ಉಸ್ತುವಾರಿ ಸಚಿವರು ಬೇಡ. ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಸಚಿವ ಸ್ಥಾನಕ್ಕೆ ಸಮರ್ಥರಿದ್ದಾರೆ ಎಂದಿದ್ದಾರೆ.