ETV Bharat / state

ಕುಂಟುತ್ತಾ ಸಾಗುತ್ತಿರುವ ಕೊಡಗಿನ ರಾಜರು ವಾಸವಿದ್ದ ಅರಮನೆ ನವೀಕರಣ ಕಾಮಗಾರಿ

author img

By

Published : Feb 25, 2023, 11:01 PM IST

ಕೊಡಗು ಜಿಲ್ಲೆಯ ಮಡಿಕೇರಿಯ ಅರಮನೆ - ಕುಂಟುತ್ತಾ ಸಾಗುತ್ತಿರುವ ಅರಮನೆಯ ನವೀಕರಣ ಕಾರ್ಯ - ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ

delay-of-madikeri-fort-renovation-work
ಕುಂಟುತ್ತಾ ಸಾಗುತ್ತಿರುವ ಕೊಡಗಿನ ರಾಜರು ವಾಸವಿದ್ದ ಅರಮನೆ ನವೀಕರಣ ಕಾಮಗಾರಿ
ಕುಂಟುತ್ತಾ ಸಾಗುತ್ತಿರುವ ಕೊಡಗಿನ ರಾಜರು ವಾಸವಿದ್ದ ಅರಮನೆ ನವೀಕರಣ ಕಾಮಗಾರಿ

ಕೊಡಗು : ಜಿಲ್ಲೆಯ ಪ್ರಸಿದ್ಧ ಅರಮನೆಯೊಂದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿತ್ತು. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಅರಮನೆಗೆ ಕಾಯಕಲ್ಪ ಕಲ್ಪಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಈ ಅರಮನೆ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ನವೀಕರಣ ಕಾರ್ಯ ಆರಂಭವಾಗಿ ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಒಂದೆಡೆ ಕುಂಟುತ್ತಾ ಸಾಗುತ್ತಿರುವ ಅರಮನೆ ದುರಸ್ಥಿ ಕಾರ್ಯ, ಇನ್ನೊಂದೆಡೆ ನವೀಕರಣ ಕಾಮಗಾರಿ ಕುರಿತು ಡಿಸಿಗೆ ವರದಿ ಕೇಳಿದ ನ್ಯಾಯಾಲಯ, ಮತ್ತೊಂದೆಡೆ ಅರಮನೆ ಕಾಮಗಾರಿ ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿ. ಈ ದೃಶ್ಯ ಕಂಡುಬಂದಿದ್ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೃದಯಭಾಗದಲ್ಲಿರುವ ಕೋಟೆ ಆವರಣದಲ್ಲಿ.

ಇದು ರಾಜ ಮಹಾರಾಜರು ಇದ್ದ ಅರಮನೆ. ಇಲ್ಲಿ ಸಾಕಷ್ಟು ಯುದ್ಧಗಳು ನಡೆದರೂ ಈ ಒಂದು ಕೋಟೆ ಮಾತ್ರ ಮಳೆ ಗಾಳಿಗೆ ಅಂಜದೆ ಇನ್ನೂ ಗಟ್ಟಿ ಮುಟ್ಟಾಗಿತ್ತು. ಕೆಲ ವರ್ಷಗಳ ಹಿಂದೆಯಷ್ಟೇ ಇಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳನ್ನು ಇಲ್ಲಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಬಳಿಕ ಈ ಕೋಟೆಯನ್ನು ಪ್ರಾಚ್ಯವಸ್ತು ಇಲಾಖೆಯು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನಂತರ ಇಲ್ಲಿನ ಎಲ್ಲ ಕಾರ್ಯವನ್ನು ಪ್ರಾಚ್ಯ ವಸ್ತು ಇಲಾಖೆಯು ನೋಡಿಕೊಳ್ಳುತ್ತಿತ್ತು.

ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ : ಇನ್ನು ಪುರಾತತ್ವ ಇಲಾಖೆಯು 2021ರ ಅಕ್ಟೋಬರ್ ತಿಂಗಳಲ್ಲಿ 10.70 ಕೋಟಿ ವೆಚ್ಚದಲ್ಲಿ ಅರಮನೆ ನವೀಕರಣ ಕಾರ್ಯವನ್ನು ಆರಂಭಿಸಿತ್ತು. ಕಾಮಗಾರಿ ಆರಂಭವಾಗಿ ಸರಿಯಾಗಿ ಒಂದೂವರೆ ವರ್ಷ ಕಳೆದಿದ್ದು, ಕೇವಲ ಅರಮನೆಯ ಮೇಲ್ಛಾವಣಿಯ ಕೆಲಸ ಮಾತ್ರ ಮುಗಿದಿದೆ. ಇನ್ನುಳಿದ ಎಲ್ಲ ಕಾಮಗಾರಿಗಳೂ ಹಾಗೆ ಉಳಿದಿವೆ.

ಶತಮಾನಗಳ ಇತಿಹಾಸವಿರುವ ಈ ಕೋಟೆ ನಿರ್ವಹಣೆಯ ಕೊರತೆಯಿಂದ ಕುಸಿಯುವ ಹಂತ ತಲುಪಿತ್ತು. ಕೋಟೆಯ ದುಸ್ಥಿತಿ ಕಂಡು ಆಲೂರು ಸಿದ್ದಾಪುರ ನಿವಾಸಿ ಜೆ.ಎಸ್.ವಿರೂಪಾಕ್ಷಯ್ಯ ಎಂಬವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಅರಮನೆಗೆ ಕಾಯಕಲ್ಪ ಸಲ್ಲಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಶಿಥಿಲಾವಸ್ಥೆಯಲ್ಲಿದ್ದ ಅರಮನೆ ಕಟ್ಟಡವನ್ನು ನವೀಕರಣಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಐಎಲ್ ಸಲ್ಲಿಸಿದ ಪರಿಣಾಮ ಅರಮನೆ ನವೀಕರಣ ಕಾಮಗಾರಿ ಶುರುವಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಿ ಸಾಗುತ್ತಿದ್ದರಿಂದ ವಿರೂಪಾಕ್ಷಯ್ಯ ಅವರು ಮತ್ತೆ ಹೈಕೋರ್ಟ್​ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನವೀಕರಣ ಕಾಮಗಾರಿ ಕುರಿತು ವರದಿ ನೀಡುವಂತೆ ಜಿಲ್ಲಾಡಳಿಕ್ಕೆ ಸೂಚಿಸಿತ್ತು.ಈ ಹಿನ್ನಲೆ ಕೊಡಗು ಜಿಲ್ಲಾಧಿಕಾರಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಜೊತೆಗೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು, ಕೆಲವು ಸಮಸ್ಯೆಗಳಿಂದ ಕಾಮಗಾರಿ ಕುಂಠಿತಗೊಂಡಿತ್ತು. 2023 ಆಗಸ್ಟ್, ಸೆಪ್ಟೆಂಬರ್ ಅಂತ್ಯದಲ್ಲಿ ನವೀಕರಣ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮಡಿಕೇರಿ ಕೋಟೆಗೆ ಕೂಡಿಬಂದ ಕಾಯಕಲ್ಪ: ನವೀಕರಣಕ್ಕೆ ಪ್ರಾಚ್ಯವಸ್ತು ಇಲಾಖೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.