ETV Bharat / state

ಮಂಜಿನ ನಗರಿ ದಸರಾಕ್ಕೆ ಚಾಲನೆ... ಕಳೆಗಟ್ಟಿದ ದಸರಾ ಸಂಭ್ರಮ - kodagu Dasara

ಎಲ್ಲೆಡೆ ಈಗ ನಾಡ ಹಬ್ಬ ದಸರಾ ಸಂಭ್ರಮ ಶುರುವಾಗಿದೆ. 147 ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾಗೆ ನಗರದ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು‌.

ಮಂಜಿನ ನಗರಿ ದಸರಾ
author img

By

Published : Sep 30, 2019, 1:43 PM IST

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾಕ್ಕೆ ಇಂದಿನಿಂದ ಅದ್ಧೂರಿ ಚಾಲನೆ ಸಿಕ್ಕಿದೆ. 9 ದಿನಗಳ ದಸರಾ ಉತ್ಸವ ಇಂದು ಕರಗ ಹೊರುವ ಮೂಲಕ ಪ್ರಾರಂಭಗೊಂಡಿದ್ದು, ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದೆ.

ಎಲ್ಲೆಡೆ ಈಗ ನಾಡ ಹಬ್ಬ ದಸರಾ ಸಂಭ್ರಮ ಶುರುವಾಗಿದೆ. 147 ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾಗೆ ನಗರದ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು‌. ನಗರದ ಪಂಪಿನ ಕೆರೆ ಬಳಿಯಲ್ಲಿ ನಾಲ್ಕು ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‌ಸಿ ವೀಣಾ ಅಚ್ಚಯ್ಯ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು‌. ನಾಳೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ಮಂಜಿನ ನಗರಿ ದಸರಾಕ್ಕೆ ಚಾಲನೆ

ಸಂಜೆ ಕರಗಗಳಿಗೆ ಪೂಜೆಸಲ್ಲಿಸಿದ ದಸರಾ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಿಗೆ ಮೊರೆಯಿಟ್ಟಿದ್ದಾರೆ. ನಗರದ ಕುಂದೂರು ಮೊಟ್ಟೆ, ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತದಾರಿಗಳು ನವರಾತ್ರಿಯ 9 ದಿನಗಳು ನಗರದ ಬೀದಿ ,ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.

ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ನಗರದ ದೇವತೆಗಳನ್ನು ಕರಗದ ಮೂಲಕ ನಗರದ ಪ್ರದಕ್ಷಿಣೆ ಮಾಡಿ ಪೂಜೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ವರ್ಷಕ್ಕೆ ಒಂದು ಬಾರಿ ದಸರಾ ಸಂದರ್ಭ ಕರಗ ಉತ್ಸವ ನಡೆಸಲಾಗುತ್ತೆ. ಮಡಿಕೇರಿಯ ಶಕ್ತಿದೇವತೆಗಳೆಂದು ಕರೆಸಿಕೊಳ್ಳುವ ನಾಲ್ಕೂ ದೇವಿಯರನ್ನು ಆರಾಧಿಸಿ ಪೂಜಿಸಲಾಗುತ್ತದೆ. ಕೊನೆಯ ದಿನ ಮಡಿಕೇರಿ ದಸರಾದ ಸ್ಪೆಷಲ್ ದಶಮಂಟಪಗಳ ಉತ್ಸವ ನಡೆಯಲಿದೆ.

Intro:ಮಂಜಿನ ನಗರಿ ಮಡಿಕೇರಿಯಲ್ಲೂ ಕಳೆಗಟ್ಟಿದ ದಸರಾ ಕಲರವ.‌!!

ಕೊಡಗು: ಐತಿಹಾಸಿಕ ಮಡಿಕೇರಿ ದಸರಾಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.ಒಂಬತ್ತು ದಿನಗಳ ದಸರಾ ಉತ್ಸವ ಇಂದು ಕರಗ ಹೊರುವ ಮೂಲಕ ಪ್ರಾರಂಭಗೊಂಡಿದ್ದು, ಮುಂದಿನ ಒಂದುವಾರ ನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ದಸರಾ ಪ್ರಯುಕ್ತ ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದ್ದು ಇಡೀ ನಗರವೇ ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿದೆ..!

ಎಲ್ಲೆಡೆ ಈಗ ನಾಡ ಹಬ್ಬ ದಸರಾ ಸಂಭ್ರಮ ಶುರುವಾಗಿದೆ. ಜಗತ್ ಪ್ರಸಿದ್ಧ ಮೈಸೂರು ದಸರಾಕ್ಕೆ ಇಂದು ಬೆಳಗ್ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು ಇತ್ತ ಐತಿಹಾಸಿಕ ಮಡಿಕೇರಿ ದಸರಾಕ್ಕೂ ಇಂದು ಚಾಲನೆ ನೀಡಲಾಗಿದೆ‌.೧೪೭ ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾ ಇಂದು ನಗರದ ನಾಲ್ಕು ಶಕ್ತಿದೇವತೆಗಳ ಕರಗಾಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು‌.

ನಗರದ ಪಂಪಿನ ಕೆರೆ ಬಳಿಯಲ್ಲಿ ನಾಲ್ಕು ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪ್ಪಯ್ಯ ಎಂಎಲ್‌ಸಿ ವೀಣಾ ಅಚ್ಚಯ್ಯ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು‌.ಕರಗಾ ಹೊರುವ ಮೂಲಕ ದಸರಾ ಪ್ರಾರಂಭಗೊಂಡಿದ್ದು ನಾಳೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಕಲಾಸಕ್ತರ ಮನತಣಿಸಲು ಅಣಿಯಾಗಿವೆ.

ಬೈಟ್-1 ಕೆ.ಜಿ ಬೋಪ್ಪಯ್ಯ, ಶಾಸಕ

ಸಂಜೆ ಕರಗಗಳಿಗೆ ಪೂಜೆಸಲ್ಲಿಸಿದ ದಸರಾ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಿಗೆ ಮೊರೆಯಿಟ್ಟಿದ್ದಾರೆ. ನಗರದ ಕುಂದೂರು ಮೊಟ್ಟೆ, ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತದಾರಿಗಳು ನವರಾತ್ರಿಯ ಒಂಬತ್ತು ದಿನಗಳು ನಗರದ ಬೀದಿ,ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ನಗರದ ದೇವತೆಗಳನ್ನು ಕರಗದ ಮೂಲಕ ನಗರದ ಪ್ರದಕ್ಷಿಣೆ ಮಾಡಿ ಪೂಜೆ ಮಾಡಲಾಗಿತ್ತು, ಅಂದಿನಿಂದ ಇಂದಿನವರೆಗೂ ವರ್ಷಕ್ಕೆ ಒಂದು ಬಾರಿ ದಸರಾ ಸಂದರ್ಭ ಕರಗ ಉತ್ಸವ ನಡೆಸಲಾಗುತ್ತೆ.ಮಡಿಕೇರಿಯ ಶಕ್ತಿದೇವತೆಗಳೆಂದು ಕರೆಸಿಕೊಳ್ಳೋ ನಾಲ್ಕೂ ದೇವಿಯರನ್ನು ಆರಾಧಿಸಿ ಜನರು ಪೂಜಿಸುತ್ತಾರೆ.

ಬೈಟ್-2 ಉಮೇಶ್ ಸುಬ್ರಮಣಿ, ದೇವಾಲಯದ ಅರ್ಚಕ‌

ಒಟ್ಟಿನಲ್ಲಿ ನಾಡಹಬ್ಬ ಎಂದೇ ಖ್ಯಾತವಾದ ದಸರಾ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.ಶಕ್ತಿದೇವತೆಗಳ ಆರಾಧನೆಗೆ ಹೆಸರಾದ ಈ ನವರಾತ್ರಿ ಉತ್ಸವದ ವೇಳೆ ನಾನಾ ವೈವಿದ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿದ್ದು ಕೊನೆಯ ದಿನ ಮಡಿಕೇರಿ ದಸರಾದ ಸ್ಪೆಷಲ್ ದಶಮಂಟಪಗಳ ಉತ್ಸವ ಎಲ್ಲರನ್ನು ಬೆರಗುಗೊಳಿಸಲಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.