ETV Bharat / state

ವಿರಾಜಪೇಟೆಯಲ್ಲಿ ಕಾದಾಟದಿಂದ ಗಾಯಗೊಂಡ ಹುಲಿ ಸಾವು - ನಾಗರಹೊಳೆ

ತೀವ್ರವಾಗಿ ಗಾಯಗೊಂಡಿದ್ದ ಹುಲಿ ಸಾವನ್ನಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

Critically injured tiger died
ಕಾದಾಟದಿಂದ‌ ತೀವ್ರವಾಗಿ ಗಾಯಗೊಂಡಿದ್ದ ಹುಲಿ ಸಾವು
author img

By

Published : Jun 19, 2023, 10:55 PM IST

ಕೊಡಗು: ಗಾಯಗೊಂಡಿದ್ದ ಹುಲಿಯೊಂದು ಸಾವನ್ನಪಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ಅಸ್ತಾನ ಹಾಡಿಯಲ್ಲಿ ನಡೆದಿದೆ. ದುಬಾರೆ ಅರಣ್ಯದಂಚಿನ ಕೆರೆಯ ಬಳಿ ಕಳೇಬರ ಪತ್ತೆಯಾಗಿದೆ. ಹುಲಿಯ ಕಾಲು ಹಾಗೂ ಎದೆಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿದ್ದವು. ಅಸಹಾಯಕ ಸ್ಥಿತಿಯಲ್ಲಿ ಕೆರೆಯ ಸಮೀಪದಲ್ಲಿ ಗಾಯಗೊಂಡು ಕಾಣಿಸಿಕೊಂಡಿತ್ತು. ಅಸ್ವಸ್ಥ ಹುಲಿ ಕಾಡಂಚಲ್ಲಿ ಸುತ್ತಾಡುವ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿತ್ತು.

ಸೆರೆ ಹಿಡಿಯಲು ಬರುವ ಮುನ್ನವೇ ಹುಲಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿಗಳ ನಡುವಿನ ಕಾದಾಟದಿಂದ‌ ತೀವ್ರ ಗಾಯಗೊಂಡಿದ್ದು, ರಕ್ತಸ್ರಾವ ಹಾಗೂ ಸರಿಯಾದ ಆಹಾರವಿಲ್ಲದ ಕಾರಣಕ್ಕೆ ನಿತ್ರಾಣಗೊಂಡು ಸಾವನ್ನಪ್ಪಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಇದೇ ಹುಲಿ ನಾಗರಹೊಳೆಯ ಕಲ್ಲಾಳ ಬಳಿ ಪತ್ತೆಯಾಗಿತ್ತು ಎಂದು ಅವರು ತಿಳಿಸಿದರು.

ಬಂಡೀಪುರದಲ್ಲಿ ಇತ್ತೀಚೆಗೆ ಹೆಣ್ಣಾನೆ ಸಾವು: ಗುಂಡ್ಲುಪೇಟೆ‌ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಗೆ ಬರುವ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದ ಚಿಕ್ಕತೋಟದ ಶನೇಶ್ವರ ತೋಪಿನ ಹತ್ತಿರ ಶನಿವಾರ ಸಂಜೆ ಅಂದಾಜು 65 ವರ್ಷದ ಹೆಣ್ಣಾನೆ ಸಾವನ್ನಪ್ಪಿದೆ. ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿ ದಾಟಿ ಬಂಡೀಪುರ ವ್ಯಾಪ್ತಿಗೆ ಬರುವ ಕುಂದಕೆರೆ ವಲಯಕ್ಕೆ ಬಂದಿದ್ದ ಹೆಣ್ಣಾನೆ ವಯೋ ಸಹಜವಾಗಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.

ಕೆಲವು ದಿನಗಳ‌ ಹಿಂದೆ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ಕುಂದಕೆರೆ ವಲಯದ ಕಡಬೂರು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿರುವ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ದಾರಿ ತಪ್ಪಿಸಿಕೊಂಡು ಬಂದಿದ್ದ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದರು. ಆದ್ರೆ ಕಾಡಿಗೆ ಹಿಂದಿರುಗದೇ ಪೋತರಾಜು ಎಂಬವರ ಜಮೀನಿನಲ್ಲಿ ಉಳಿದುಕೊಂಡಿತ್ತು. ನಂತರವೂ ಕೂಡ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಲು ಕಾರ್ಯವನ್ನು ಚುರುಕುಗೊಳಿಸಿದ್ದರು. ಆದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಮರುದಿನ ಮಧ್ಯಾಹ್ನದ ವೇಳೆ, ಅಂದ್ರೆ ಶನಿವಾರ ಚಿರಕನಹಳ್ಳಿ ಗ್ರಾಮದ ಸಮೀಪ ಆನೆ ಮೃತಪಟ್ಟಿರುವುದಾಗಿ ಬಂಡೀಪುರ ಸಿಎಫ್ ರಮೇಶ್ ಕುಮಾರ್ ತಿಳಿಸಿದ್ದರು.

ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ ಹಾಗೂ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಮತ್ತು ಕುಂದಕೆರೆ ಆರ್​ಎಫ್​​ಓ ಶ್ರೀನಿವಾಸ್ ಆನೆ ಮೃತಪಟ್ಟಿರುವ ಸ್ಥಳಕ್ಕೆ ತೆರಳಿ, ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅಂಗಾಂಗ ಮಾದರಿ ಸಂಗ್ರಹಿಸಿ, ವಿಧಿ ವಿಜ್ಞಾನ ಲ್ಯಾಬ್​ಕ್ಕೆ ಕಳುಹಿಸಿದ್ದರು. ವರದಿ ಬಂದ ಬಳಿಕ ಸಾವಿಗೆ ನೈಜ ಮಾಹಿತಿ ತಿಳಿಯಲಿದೆ. ಮೇಲ್ನೋಟಕ್ಕೆ ಸಹಜ ಸಾವು ಎಂದು ಅಧಿಕಾರಿಗಳು ತಿಳಿಸಿದ್ದರು.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ‌ ಮರೂರು ಗ್ರಾಮಕ್ಕೆ ಇತ್ತೀಚೆಗೆ ಆನೆಯೊಂದು ಗ್ರಾಮಕ್ಕೆ ನುಗ್ಗಿ ತುಂಬಾ ಹಾನಿ ಮಾಡಿತ್ತು. ಆನೆ ನಾಗಣ್ಣ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಮತ್ತು ಗೇಟ್ ತುಳಿದು ಹಾನಿಗೊಳಿಸಿತ್ತು.

ಇದನ್ನೂ ಓದಿ: ಕೃಷ್ಣಾ ನದಿಯ ಒಡಲಾಳದಲ್ಲಿ ಪುರಾತನ ದೇವಾಲಯ: ಬರಗಾಲದಲ್ಲಿ ಮಾತ್ರ ಗೋಚರಿಸುವ ಈ ಗುಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.