ETV Bharat / state

ಸಂಪಿನಕಟ್ಟೆ ರಸ್ತೆಯಲ್ಲಿ ಮತ್ತೆ ಬಿರುಕು: ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ - ಮುಂಗಾರು

ಗುತ್ತಿಗೆದಾರರು ಎಂ ಸ್ಯಾಂಡ್ ಬಳಸಿ ಕಾಟಾಚಾರಕ್ಕೆ ಕಳಪೆ ಕಾಮಗಾರಿ ಮಾಡಿದ್ದಾರೆ. ಇದರಿಂದಲೇ ರಸ್ತೆಯಲ್ಲಿ ಪುನಃ ಬಿರುಕು ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಕೂಡಲೇ ಈ ಭಾಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿ ಕೃಷ್ಣಭಟ್ ಒತ್ತಾಯಿಸಿದ್ದಾರೆ.

ಬಿರುಕು
author img

By

Published : Jul 6, 2019, 7:17 PM IST

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ‌ಮುಂಗಾರು ಬಿರುಸು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಭೂ ಕುಸಿತವಾಗಿ ಪುನರ್ ನವೀಕರಿಸಿದ್ದ ರಸ್ತೆಗಳ ಮಧ್ಯೆಯೇ ಪುನಃ ಬಿರುಕು ಕಾಣಿಸಿಕೊಳ್ಳುತ್ತಿದೆ.‌

ನಗರದ ಹೊರಭಾಗದ ಅಬ್ಬಿ ಫಾಲ್ಸ್ ರಸ್ತೆಯ ಸಂಪಿಗೆಕಟ್ಟೆ ಬಳಿ ರಸ್ತೆ ಮಧ್ಯೆಯೇ ಬಿರುಕು ಕಾಣಿಸಿಕೊಂಡಿರುವುದು ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಬಾರಿ ಕುಸಿದಿದ್ದ ರಸ್ತೆಯಲ್ಲಿ ಇಂದು ಪುನಃ ಬಿರುಕು ಕಾಣಿಸಿಕೊಂಡಿರುವುದು ಮತ್ತಷ್ಟು ಭೀತಿ ಎದುರಾಗುವಂತೆ ಮಾಡಿದೆ.

ಕೇವಲ ಎರಡೇ ಮಳೆಗೆ ದುರಸ್ತಿ ಮಾಡಿದ ರಸ್ತೆ ಕುಸಿಯುತ್ತಿದೆ. ಕಳೆದ ಬಾರಿಯ ಮಹಾಮಳೆಗೆ ಇಲ್ಲಿ ರಸ್ತೆ ಕುಸಿದಿತ್ತು. ಗುತ್ತಿಗೆದಾರರು ಎಂ ಸ್ಯಾಂಡ್ ಬಳಸಿ ಕಾಟಾಚಾರಕ್ಕೆ ಕಳಪೆ ಕಾಮಗಾರಿ ಮಾಡಿದ್ದಾರೆ. ಇದರಿಂದಲೇ ರಸ್ತೆಯಲ್ಲಿ ಪುನಃ ಬಿರುಕು ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಕೂಡಲೇ ಈ ಭಾಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿ ಕೃಷ್ಣಭಟ್ ಒತ್ತಾಯಿಸಿದ್ದಾರೆ.

ಸಂಪಿನಕಟ್ಟೆ ರಸ್ತೆಯಲ್ಲಿ ಮತ್ತೆ ಬಿರುಕು

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಬಿರುಕಿನಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಮಣ್ಣು ಮತ್ತಷ್ಟು ಸಡಿಲಗೊಳ್ಳುವ ಸಂಭವ ಹೆಚ್ಚಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ಬಿರುಕು ಕಾಣಿಸಿಕೊಂಡಿರುವ ಸ್ಥಳದಲ್ಲಿ ಪೊಲೀಸ್ ಬ್ಯಾರಿಕೇಡ್​ಗಳನ್ನು ಅಳವಡಿಸಿದೆ.‌

ಎರಡು ದಿನಗಳ ಹಿಂದೆ ಮೈಸೂರು-ಮಂಗಳೂರು ಸಂಪರ್ಕ ಕಲ್ಪಿಸುವ (ಮಡಿಕೇರಿ ಮಾರ್ಗ) ರಾಷ್ಟ್ರೀಯ ಹೆದ್ದಾರಿ 275 ರ ಕಾಟಕೇರಿ ಬಳಿ ರಸ್ತೆ ಮಧ್ಯೆ ಸುಮಾರು 10 ಮೀಟರ್ ಬಿರುಕು ಕಾಣಿಸಿಕೊಂಡಿತ್ತು.

Intro:ಸಂಪಿನಕಟ್ಟೆ ರಸ್ತೆಯಲ್ಲಿ ಮತ್ತೆ ಬಿರುಕು: ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ 

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ‌ಮುಂಗಾರು ಬಿರುಸು ಪಡೆದುಕೊಂಡಿರುವ ಹಿನ್ನಲೆಯಲ್ಲಿ ಕಳೆದ ಬಾರಿ ಭೂ ಕುಸಿತವಾಗಿ ಪುನರ್ ನವೀಕರಿಸಿದ್ದ ರಸ್ತೆಗಳ ಮಧ್ಯೆಯೇ ಪುನಃ ಬಿರುಕು ಕಾಣಿಸಿಕೊಳ್ಳುತ್ತಿದೆ.‌

ನಗರದ ಹೊರಭಾಗದ ಅಬ್ಬಿಫಾಲ್ಸ್ ರಸ್ತೆಯ ಸಂಪಿಗೆಕಟ್ಟೆ ಬಳಿ ರಸ್ತೆ ಮಧ್ಯೆಯೇ ಬಿರುಕು ಕಾಣಿಸಿಕೊಂಡಿರುವುದು  ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕಳೆದ ಬಾರಿ ಕುಸಿದಿದ್ದ ರಸ್ತೆಯಲ್ಲಿ ಇಂದು ಪುನಃ ಬಿರುಕು ಕಾಣಿಸಿಕೊಂಡಿರುವುದು ಮತ್ತಷ್ಟು ಭೀತಿ ಎದುರಾಗಿದೆ. 

ಕೇವಲ ಎರಡೇ ಮಳೆಗೆ ದುರಸ್ತಿ ಮಾಡಿದ ರಸ್ತೆ ಕುಸಿಯುತ್ತಿದೆ.ಕಳೆದ ಬಾರಿಯ ಮಹಾ ಮಳೆಗೆ ಇಲ್ಲಿ ರಸ್ತೆ ಕುಸಿದಿತ್ತು. ಗುತ್ತಿಗೆದಾರರು ಎಂ ಸ್ಯಾಂಡ್ ಬಳಸಿ ಕಾಟಾಚಾರಕ್ಕೆ ಕಳಪೆ ಕಾಮಗಾರಿ ಮಾಡಿದ್ದಾರೆ. ಇದರಿಂದಲೇ ರಸ್ತೆಯಲ್ಲಿ ಪುನಃ ಬಿರುಕು ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಕೂಡಲೇ ಈ ಭಾಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿ ಕೃಷ್ಣಭಟ್ ಒತ್ತಾಯಿಸಿದ್ದಾರೆ. 

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು,ಬಿಟ್ಟು ಮಳೆ ಸುರಿಯುತ್ತಿದ್ದು, ಬಿರುಕಿನಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಮಣ್ಣು ಮತ್ತಷ್ಟು ಸಡಿಲಗೊಳ್ಳುವ  ಸಂಭವ ಹೆಚ್ಚಿದೆ.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ಬಿರುಕು ಕಾಣಿಸಿಕೊಂಡಿರುವ ಸ್ಥಳದಲ್ಲಿ ಪೊಲೀಸ್ ಬ್ಯಾರಿಕೇಡ್ ಗಳನ್ನು ಅಳವಡಿಸಿದೆ.‌ 

ಎರಡು ದಿನಗಳ ಹಿಂದೆ ಮೈಸೂರು-ಮಂಗಳೂರು ಸಂಪರ್ಕ ಕಲ್ಪಿಸುವ (ಮಡಿಕೇರಿ ಮಾರ್ಗ) ರಾಷ್ಟ್ರೀಯ ಹೆದ್ದಾರಿ 275 ರ ಕಾಟಕೇರಿ ಬಳಿ ರಸ್ತೆ ಮಧ್ಯೆ ಸುಮಾರು 10 ಮೀಟರ್ ಬಿರುಕು ಕಾಣಿಸಿಕೊಂಡಿತ್ತು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.