ETV Bharat / state

ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಸೋಂಕು! - ಮಡಿಕೇರಿಯ ಕೊಡಗು ಕೊವೀಡ್ ಆಸ್ಪತ್ರೆ

ಮಡಿಕೇರಿಯಲ್ಲಿರುವ ಕೊಡಗು ಕೊವೀಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 7 ವೈದ್ಯರು ಮತ್ತು ನರ್ಸ್‍ಗಳಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಈ ಹಿನ್ನೆಲೆ ಇವರ ಸಂಪರ್ಕಕ್ಕೆ ಬಂದ ರೋಗಿಗಳು ಅದೆಷ್ಟೋ ಎಂಬ ತಲೆನೋವು ಅಧಿಕಾರಿಗಳಿಗೆ ಕಾಡತೊಡಗಿದೆ.

corona-positive-to-doctors-and-nurse-in-kodagu
ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‌ಗೂ ಕೊರೊನಾ
author img

By

Published : Jun 25, 2020, 3:18 AM IST

ಕೊಡಗು : ಕೊವೀಡ್-19 ವಿರುದ್ಧ ಹೋರಾಡುತ್ತ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹಾಗೂ ನರ್ಸ್‍ಗಳು ಸೇರಿದಂತೆ ಒಂದೇ ದಿನದಲ್ಲಿ 14 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.ಆದರೆ, ಇವರ ಪ್ರಾಥಮಿಕ ಸಂಪರ್ಕದ ಲೆಕ್ಕವೇ ತರ್ಕವಾಗಿದೆ.

ಮಡಿಕೇರಿಯಲ್ಲಿರುವ ಕೊಡಗು ಕೊವೀಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 7 ವೈದ್ಯರು ಮತ್ತು ನರ್ಸ್‍ಗಳಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಕೊರೊನಾ ರೋಗಿ 9583 ನ ಸಂಪರ್ಕದಿಂದ ಮೂವರಿಗೆ ಪಾಸಿಟಿವ್ ಆಗಿದ್ದರೆ, 9215 ನೇ ರೋಗಿಯ ಸಂಪರ್ಕದಿಂದ ಇಬ್ಬರಿಗೆ ಮಹಾಮಾರಿ ವಕ್ಕರಿಸಿದೆ. ಅಲ್ಲದೆ ರೋಗ ಲಕ್ಷಣದಿಂದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರಿಗೆ ಕೊರೊನಾ ಹೆಗಲೇರಿದೆ. ಹೀಗಾಗಿ ಒಟ್ಟು ಒಂದೇ ದಿನ ಬರೋಬ್ಬರಿ 14 ಜನರಿಗೆ ಮಹಾಮಾರಿ ವಕ್ಕರಿಸಿದೆ.

ಹೀಗಾಗಿ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ 22 ಕ್ಕೆ ಏರಿದೆ. ಇನ್ನು ಮಡಿಕೇರಿಯ ಜಿಲ್ಲಾಸ್ಪತ್ರೆ ಕೊವಿಡ್ ಆಸ್ಪತ್ರೆಯಾಗಿ ಬದಲಾಗಿದ್ದರಿಂದ ನಗರ ಅಶ್ವಿನಿ ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಬದಲಾಯಿಸಲಾಗಿತ್ತು. ಆದರೆ, ಆಸ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿತ್ತಿದ್ದ ವೈದ್ಯರಿಗೂ ಕೊರೊನಾ ಹೆಗಲೇರಿದೆ. ಹೀಗಾಗಿ ಅಶ್ವಿನಿ ಆಸ್ಪತ್ರೆಯನ್ನು ಇಂದು ಸೀಲ್‌ಡೌನ್ ಮಾಡಿ ಸ್ಯಾನಿಟೈಸರ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್‍ಗಳಿಗೂ ಕೊರೊನಾ ಪಾಸಿಟಿವ್ ಪ್ರಕರಣ ಆಗಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಆತಂಕ್ಕೆ ಕಾರಣವಾಗಿದೆ. ಅಲ್ಲದೆ ಜನರಲ್ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ನರ್ಸ್‌ಗಳಿಗೂ ಕೊರೊನಾ ಪಾಸಿಟಿವ್ ಆಗಿರುವುದು, ಇಲ್ಲಿನ ಚಿಕಿತ್ಸೆ ಪಡೆದುಕೊಂಡ ಇತರೆ ರೋಗಿಗಳಿಗೂ ಇದು ಆತಂಕಕ್ಕೆ ಎಡೆ ಮಾಡಿದೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊಡಗಿನತ್ತ ಸುಳಿಯದ ಕೊರೊನಾ ಮಹಾಮಾರಿ ಮೂರು ದಿನಗಳಿಂದ ಎರಡಂಕಿಯ ಮೇಲೆ ಬರುತ್ತಿರುವುದು ಕೊಡಗಿನ ಜನರನ್ನು ಆತಂಕ್ಕೆ ದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.