ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಟ್ಟಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೊಟ್ಟಗೇರಿಯ ತಿರುನೆಲ್ಲಿಮಾಡ ಪಿ.ತಮ್ಮಯ್ಯ ಅವರ ಹಸು ಮೇಲೆರಗಿ ದೇಹದ ಅರ್ಧ ಭಾಗವನ್ನು ತಿಂದಿದೆ. 4 ದಿನಗಳಿಂದ ಕಾಣೆಯಾಗಿದ್ದ ಹಸು ಸಂಜೆ ಪತ್ತೆಯಾಗಿದೆ.
ವಿರಾಜಪೇಟೆ ವ್ಯಾಪ್ತಿಯಲ್ಲಿ ನಾಲ್ಕೈದು ತಿಂಗಳಿಂದ ಹಸುಗಳನ್ನು ಬಲಿ ತೆಗೆದುಕೊಳ್ಳತ್ತಿರುವ ಹುಲಿಯ ಆರ್ಭಟ ಕಂಡು ಸ್ಥಳೀಯರಲ್ಲಿ ಆಂತಕ ಮನೆ ಮಾಡಿದ್ದು, ಹುಲಿ ಹಾವಳಿ ತಪ್ಪಿಸಿ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.