ETV Bharat / state

ಆತ್ಮಸಾಕ್ಷಿಗೆ ಅನುಗುಣವಾಗಿ ಸಿದ್ದರಾಮಯ್ಯ ನಡೆದುಕೊಳ್ಳಲಿ: ಪ್ರತಾಪ್ ಸಿಂಹ

author img

By

Published : Jun 29, 2023, 9:52 PM IST

ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಆತ್ಮಸಾಕ್ಷಿಗೆ ಅನುಗುಣವಾಗಿ ಸಿಎಂ ಸಿದ್ದರಾಮಯ್ಯ ನಡೆದುಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Pratap Simha
ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ ಮಾತನಾಡಿದರು.

ಮಡಿಕೇರಿ: ''ಚುನಾವಣೆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ 5 ಕೆಜಿ ಅಕ್ಕಿ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನುಡಿದಂತೆ 10 ಕೆಜಿ ಅಕ್ಕಿ ಅಥವಾ 10 ಕೆಜಿ ಅಕ್ಕಿಯ 34 ರೂ.ನಂತೆ ಕೊಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಸಿದ್ದರಾಮಯ್ಯ ನಡೆದುಕೊಳ್ಳಬೇಕು'' ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು.

ಮಡಿಕೇರಿಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಭೆಗೆ ಅಗಮಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ''ಚುನಾವಣೆ ಸಮಯದಲ್ಲಿ 10 ಕೆಜಿ ಕೊಡುತ್ತೇನೆ ಅಂತ ತಿಳಿಸಿದ್ದೀರಿ. ಈಗ ಯಾಕೆ 5 ಕೆಜಿ ಬಗ್ಗೆ ಮಾತನಾಡುತ್ತಿದ್ದಿರಿ? 5 ಕೆಜಿ ಅಕ್ಕಿ ಕೇಂದ್ರ ಕೊಡುತ್ತಿದೆ. ನೀವು ನುಡಿದಂತೆ 10 ಕೆಜಿಗೆ 34 ರೂ. ನಂತೆ ಕೊಡಿ. ಗ್ಯಾರಂಟಿ ಘೋಷಿಸುವಾಗ ಕೇಂದ್ರದ ಮೊದೀಜಿ ನೇತೃತ್ವದ ಸರ್ಕಾರ ಕೊಡುತ್ತಿರುವುದನ್ನು ಸೇರಿಸಿ ಹೇಳಿದ್ರಾ ಎಂದು ಪ್ರಶ್ನಿಸಿದರು.

''ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿರುವುದಕ್ಕೆ ಅನ್ನಭಾಗ್ಯ ಲೇಬಲ್ ಹಾಕಿದ್ರಿ, ಈಗ ಸತ್ಯ ಒಪ್ಪಿಕೊಂಡಿದ್ದೀರಾ. ಕೇಂದ್ರದ ಅಕ್ಕಿಯ ಪಾಲಿನ ಬಗ್ಗೆ ಸತ್ಯ ಒಪ್ಪಿಕೊಂಡಿರುವುದಕ್ಕೆ ಸಿದ್ದರಾಮಯ್ಯರಿಗೆ ಧನ್ಯವಾದ" ಎಂದರು. "ಅಂತ್ಯೋದಯ ಯೋಜನೆ ಜಾರಿಗೆ ತಂದಿದ್ದು ವಾಜಪೇಯಿ ಅವರು. ಅದು ನಿಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಲ್ಲ. 8 ರಾಷ್ಟ್ರಗಳ ನಡುವೆ ನಡೆದ ಸಭೆಯಲ್ಲಿ ಪ್ರಮುಖವಾಗಿ ಜನರಿಗೆ ಹಸಿವು ಹಾಗೂ ಪೌಷ್ಟಿಕಾಂಶ ಅಹಾರ ಬಗ್ಗೆ ಚರ್ಚೆ ನಡೆಸಿ, ನಂತರ ವಾಜಪೇಯಿ ಅವರು ಅಂತ್ಯೋದಯ ಯೋಜನೆ ಜಾರಿಗೆ ತಂದಿದ್ರು ಇದನ್ನು ನೆನಪಿಸಿಕೊಳ್ಳಬೇಕು'' ಎಂದರು.

ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ಬಗ್ಗೆ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ, "ಈ ಹಿಂದೆ ಬಿಜೆಪಿ ಸರ್ಕಾರ ಇರುವಾಗ ಶೇ 40ರಷ್ಟು ಸರ್ಕಾರ ಎಂದು ಎಲ್ಲ ಕಡೆಗಳಲ್ಲಿ ತಮಟೆ ಹೊಡೆದುಕೊಂಡು ಹೇಳುತ್ತಿದ್ರು. ಇದೀಗ ಅವರ ಸರ್ಕಾರದಲ್ಲಿ ಮಾಡುತ್ತಿರುವುದು ಏನು? ಈಗ ನಿಮ್ಮದೇನು ಪೊಸ್ಟಿಂಗ್ ಸರ್ಕಾರನಾ‌‌?'' ಎಂದು ಅಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಕಾಂಗ್ರೆಸ್ ಡಿಎನ್​ಎನಲ್ಲೇ ಇದೆ- ಆರ್. ಅಶೋಕ್ : ''ಕಾಂಗ್ರೆಸ್​ನವರಿಗೆ ಭ್ರಷ್ಟಾಚಾರ ಮಾಡುವುದು ಅವರ ಡಿಎನ್ಎನಲ್ಲೇ ಇದೆ. ಬಿಹಾರದಲ್ಲಿ ಮೇವು, ಕಲ್ಲಿದ್ದಲು, 2ಜಿ ಹಗರಣ, ಭೂಮಿ ತಿಂದವರು. ಅಲಿಬಾಬಾ ಮತ್ತು 40 ಕಳ್ಳರು ಈಗ 5 ಗ್ಯಾರಂಟಿಗಳನ್ನು ಕೊಡುತ್ತಿಲ್ಲ. ಹಲವು ಕಂಡಿಷನ್​ಗಳನ್ನು ಹಾಕುತ್ತಿದ್ದಾರೆ. ಕಾಂಗ್ರೆಸ್​ನವರು ಜನರಿಗೆ ಮೋಸ ಮಾಡುತ್ತಿದ್ದಾರೆ'' ಎಂದು ಮಾಜಿ ಡಿಸಿಎಂ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

''ಸೋಲಿನ ವಿಮರ್ಶೆಯನ್ನೇ ಮಾಡುವುದನ್ನು ಬಿಟ್ಟು ಮುಂದಿನ ಬೆಳವಣಿಗೆಯನ್ನು ಗಮನಿಸಬೇಕು. ವಿಮರ್ಶೆ ಮಾಡುತ್ತಲೇ ಇದ್ದರೆ, ನಾವು ಅಲ್ಲೇ ನಿಂತಿರುತ್ತೇವೆ. ಈಗ ಜನರಿಗೆ ಬರುವ ಅಕ್ಕಿ ಎಷ್ಟು ಎಂದು ತಿಳಿದಿದೆ. ಅಕ್ಕಿ ನೀಡುವ ಚೀಲ ಮಾತ್ರ ಸಿದ್ದರಾಮಯ್ಯನವರು, ಅದರೊಳಗೆ ಅಕ್ಕಿ ಇರುವುದು ಮೋದಿ ಅವರದು. ಈ ಹಿಂದೆ ಕೇಂದ್ರದಿಂದ ಅಕ್ಕಿ ಬದಲು ದುಡ್ಡು ಕೋಡುತ್ತೇವೆ ಎಂದು ಹೇಳಿದ್ದಾಗ ಮೋದಿಗೆ ಜ್ಞಾನ ಇದೆಯಾ ಜನರು ದುಡ್ಡು ತಿಂತರಾ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಅವರೇ ದುಡ್ಡು ಕೊಡಲು ಮುಂದಾಗಿದ್ದಾರೆ. ಇನ್ನಷ್ಟು ತಿಂಗಳುಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ವಿಳಂಬ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಯ ಅರ್ಜಿ ಪಡೆಯಲು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಬರಲಿದ್ದಾರೆ- ಸಚಿವ ಬಿ.ನಾಗೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.