ಕೊಡಗು: ಕಾರ್ಮಿಕ ಭವಿಷ್ಯ ನಿಧಿಯ ಹಣವನ್ನು ಪಾವತಿಸಿಲ್ಲ ಎಂದು ಕೇಳಿದ್ದಕ್ಕೆ ಪೌರ ಕಾರ್ಮಿಕರ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.
ಪೌರ ಕಾರ್ಮಿಕರಾದ ಆರ್ಮುಗಂ ಹಾಗೂ ಸಣ್ಣು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ, ಕಾರ್ಮಿಕರ ಪರವಾಗಿ ಮಾತನಾಡಿದ ಸಾರ್ವಜನಿಕರ ಮೇಲೂ ಕೇಸ್ ಜಡಿಯಲಾಗಿದೆ ಅಂತಿದ್ದಾರೆ ಕಾರ್ಮಿಕರು.
ಭವಿಷ್ಯ ನಿಧಿ ಹಣ ಹಾಕದೇ ಮೋಸ ಮಾಡಿದ್ದೀರಿ. ಪ್ರತಿ ತಿಂಗಳ ಸಂಬಳದಲ್ಲಿ ಪಿಎಫ್‌ಗೆ ಹಣ ಕಡಿತವಾಗುತ್ತಿದೆ. ಹಣವನ್ನು ತೆಗೆದುಕೊಳ್ಳಲು ಮುಂದಾದಾಗ ಖಾತೆಯಲ್ಲಿ ಹಣ ಇರಲಿಲ್ಲ. ಹೀಗಾಗಿ, ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿ ಪಿಎಫ್ ಹಣ ಹಾಕುವಂತೆ ಒತ್ತಾಯಿಸಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.