ಕೊಡಗು : ಸುಪ್ರೀಂಕೋರ್ಟ್ ಆದೇಶ ಇಲ್ಲದೇ ಇದ್ದರೂ ಅನಧಿಕೃತ ಕಾಮಗಾರಿಗೆ ಚಾಲನೆ ನೀಡಿದ ಆರೋಪದ ಮೇರೆಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸೇರಿ ಹಲವರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
₹89 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಅನಧಿಕೃತ ಚಾಲನೆ ನೀಡಿದ್ದರಿಂದ ಶಾಸಕ ರಂಜನ್ ಸೇರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಪುರುಶೋತ್ತಮ್ ರೈ, ಕಾವೇರಿ ನದಿ ರಕ್ಷಣಾ ವೇದಿಕೆ ಮುಖಂಡ ಚಂದ್ರಮೋಹನ್, ಕಾವೇರಿ ನೀರಾವರಿ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜುಗೌಡ ಹಾಗೂ ಕುಶಾಲನಗರ ನಿವಾಸಿ ಎಂ ಎಂ ಚರಣ್ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹೆಚ್ ಎಸ್ ಅಶೋಕ್ ದೂರು ನೀಡಿದ್ದಾರೆ.
ಅಲ್ಲದೆ ಬಸವಣ್ಣ ದೇವರ ಬನ ಟ್ರಸ್ಟ್ನಿಂದಲೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.