ಕೊಡಗು: ಮಡಿಕೇರಿ ಸಮೀಪದ ಪ್ರಮುಖ ಪ್ರವಾಸಿ ಸ್ಥಳ ಅಬ್ಬಿ ಫಾಲ್ಸ್‌ನಲ್ಲಿ ಸ್ಥಳೀಯರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊರ ಜಿಲ್ಲೆಯಿಂದ ಅಬ್ಬಿ ಫಾಲ್ಸ್ ನೋಡಲು ಪ್ರವಾಸಿಗರು ಬಂದಿದ್ದರು. ಕಾಫಿ ತೋಟದಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿದ್ದಾರೆ. ಆಗ ಸ್ಥಳೀಯರು ದಾರಿಯಲ್ಲಿ ವಾಹನ ನಿಲ್ಲಿಸಿದ ವಿಷಯಕ್ಕೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಾರಿನಲ್ಲಿದ್ದ ದೊಣ್ಣೆ ತೆಗೆದು ಹಲ್ಲೆ ಮಾಡಿದ್ದಾರೆ. ಜೊತೆಯಲ್ಲಿ ಮಹಿಳೆಯರಿದ್ದರೂ ಕೂಡ ಲೆಕ್ಕಿಸದೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರವಾಸಿಗರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
"ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ಥಳೀಯರು ಹಲ್ಲೆ ಮಾಡಿದ ವಿಡಿಯೋ ನೋಡಿ ಭಯವಾಗಿದೆ. ಮಕ್ಕಳ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲ" ಎಂದು ಪ್ರವಾಸಿಗರೊಬ್ಬರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪುತ್ತೂರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗೆ ಆಕ್ರೋಶ: ಡಿವೈಎಸ್ಪಿ ಅಮಾನತಿಗೆ ಮುತಾಲಿಕ್ ಆಗ್ರಹ
ಅಬ್ಬಿ ಫಾಲ್ಸ್‌ನಲ್ಲಿ ಕೆಲ ದಿನಗಳ ಹಿಂದೆ ಗಲಾಟೆ ನಡೆದಿತ್ತು. ಈಗ ಮತ್ತೆ ಗಲಾಟೆಯಾಗಿದೆ. ವಿವಿಧ ಪ್ರವಾಸಿ ಸ್ಥಳದಲ್ಲಿ ಹಲ್ಲೆ ನಡೆಯುತ್ತಿರುತ್ತದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಡಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ. ಕೊಡಗಿನ ಹಲವು ಪ್ರವಾಸಿ ತಾಣಗಳಲ್ಲಿ ಇತ್ತೀಚೆಗೆ ಗಲಾಟೆಗಳು ಹೆಚ್ಚಾಗುತ್ತಿವೆ. ಪೊಲೀಸರನ್ನು ನಿಯೋಜಿಸದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊಡಗಿನ ಪ್ರವಾಸಿ ತಾಣಗಳಲ್ಲಿ ಗಲಾಟೆ ಹೆಚ್ಚಳ: ಪೊಲೀಸ್ ಭದ್ರತೆ ಇಲ್ಲದಿರುವುದೇ ಕಾರಣ?
ಉದ್ಯಮಿ ಮೇಲೆ ಹಲ್ಲೆ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರು ವ್ಯವಹಾರ ಮಾಡುವ ಉದ್ಯಮಿ ಮೇಲೆ ಮಹಿಳೆ ಹಾಗೂ ಇಬ್ಬರು ಸಂಬಂಧಿಕರು ಸೇರಿ ಹಲ್ಲೆ ನಡೆಸಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಹಲ್ಲೆ ನಡೆಸಿದ ರೋನಿತ್, ದುರ್ಗಾ ಮತ್ತು ಆಕೆಯ ಸಹೋದರ ಹಾಗೂ ಇತರ ಆರೋಪಿಗಳ ವಿರುದ್ಧ ಶಂಕರ ನಗರದ ನಿವಾಸಿ ಉದ್ಯಮಿ ಅಖಿಲ್ ಅಲಿಯಾಸ್ ಹೇಮಾದ್ರಿ ಯಾದವ್ ಎಂಬುವವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ? : ಅಖಿಲ್ ಕಳೆದ ಆರು ವರ್ಷಗಳಿಂದ ಕಾರು ವ್ಯವಹಾರ ನಡೆಸುತ್ತಿದ್ದನು. 2019ರಲ್ಲಿ ವ್ಯವಹಾರ ಸಂಬಂಧ ರೋನಿತ್ ಅಲಿಯಾಸ್ ಅಮೋದಿತ್ ಸಾಮ್ಸನ್ ಎನ್ನುವ ವ್ಯವಹಾರದಲ್ಲಿ ಮೋಸ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣದಲ್ಲಿ ರೋನಿತ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ರೋನಿತ್ ಜಾಮೀನು ಪಡೆದು ಬಿಡುಗಡೆ ಆಗಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ರೋನಿತ್ ಪದೇ ಪದೆ ಕರೆ ಮಾಡಿ ಅಖಿಲ್ಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಉದ್ಯಮಿ ಮೇಲೆ ಹಲ್ಲೆ: ಮಹಿಳೆ ಸೇರಿ ಇಬ್ಬರು ಆರೋಪಿಗಳ ವಿರುದ್ಧ ದೂರು, ತನಿಖೆ