ಕೊಡಗು: ಕೊಡಗಿನ ಕಾವೇರಿ ನೀರಿನ ಋಣ ತೀರಿಸಲು ಅಮೆರಿಕದಿಂದ 70 ಲಕ್ಷ ರೂ. ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಯುಎಸ್ನಲ್ಲಿರುವ ಭಾರತ ಮೂಲದ ವೈದ್ಯ ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರೋಗ ತಡೆಯಲು ಜಿಲ್ಲಾಡಳಿತ ಪ್ರಯತ್ನ ಪಡುತ್ತಿದೆ. ಜೊತೆಗೆ ದಾನಿಗಳು ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ಕೊಡುತ್ತಿದ್ದಾರೆ. ಅಮೆರಿಕದ ಡಾ.ವಿವೇಕ್ ಮೂರ್ತಿ ಅವರ ಸ್ಕೋಪ್ ಫೌಂಡೇಶನ್ ಮೂಲಕ ಕೋವಿಡ್ ಆಸ್ಪತ್ರೆಗೆ ಉಪಕರಣಗಳನ್ನು ಕೊಟ್ಟಿದ್ದಾರೆ. ಅಮೆರಿಕದಿಂದ ಬಂದಿರುವ ಉಪಕರಣಗಳನ್ನು ಇಂದು ಕೋವಿಡ್ ಆಸ್ಪತ್ರೆ ಆವರಣದಲ್ಲಿ ರಾಜ್ಯ ಹೈಕೋರ್ಟ್ ವಕೀಲರಾದ ಚಂದ್ರಮೌಳಿ ಜಿಲ್ಲಾಧಿಕಾರಿಗೆ ಹಸ್ತಾಂತರ ಮಾಡಿದರು.
ಭಾರತ ದೇಶಕ್ಕೆ ಕೊಡಗು ಜಿಲ್ಲೆ ದೇಶಪ್ರೇಮದ ಕೇಂದ್ರ ಇದ್ದಂತೆ. ನಾನು ಮಂಡ್ಯದವನಾಗಿ ಕೊಡಗಿನ ಕಾವೇರಿ ನೀರು ಕುಡಿದಿರುವೆ. ಕಾವೇರಿ ಇಲ್ಲ ಅಂದ್ರೆ ಮಂಡ್ಯ ಬರಡು ಭೂಮಿಯಾಗುತ್ತಿತ್ತು ಈಗ ಕೊಡಗಿನ ಋಣ ತೀರಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಅಮೆರಿಕದ ಆರೋಗ್ಯ ಸಚಿವಾಲಯದ ಸರ್ಜನ್ ಜನರಲ್ ಡಾ.ಹಲ್ಲಗೆರೆ ನರಸಿಂಹ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.
95 ಸಾವಿರ ಮಾಸ್ಕ್, 5 ಲೀ ಸಾಮರ್ಥ್ಯದ 15 ಆಕ್ಸಿಜನ್ ಕಾನ್ಸ್ಟ್ರೇಷನ್ಗಳು, 12 ಸಾವಿರ ಮಾಸ್ಕ್, 6200 ಫೇಸ್ ಶೀಲ್ಡ್, 25 ಥರ್ಮೋಮಿಟರ್ ಸೇರದಂತೆ ಇತರ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ.