ETV Bharat / state

ಕೊಡಗು : ಲಂಚ ಪಡೆಯುತ್ತಿದ್ದ ಮುಖ್ಯ ಇಂಜಿನಿಯರ್ ಎಸಿಬಿ ಬಲೆಗೆ - ಕೊಡಗಿನಲ್ಲಿ ಇಂಜಿನಿಯರ್ ಎಸಿಬಿ ಬಲೆಗೆ

ಈ ಹಿಂದೆ ಶ್ರೀಕಂಠಯ್ಯ ಲಂಚ ಪಡೆದು ಎಸಿಬಿ ಬಲೆಗೆ ಬಿದ್ದು ಅಮಾನತುಗೊಂಡಿದ್ದರು. ಕರ್ತವ್ಯಕ್ಕೆ ಹಾಜರಾಗಿ ಮತ್ತೆ ಅದೇ ಕೆಲಸ ಮಾಡಿದ್ದಾರೆ. ಶ್ರೀಕಂಠಯ್ಯ ಜೊತೆಗೆ ಎಂಜಿಯರ್ ತೌಸಿಪ್ ಎಂಬುವರನ್ನು ಎಸಿಬಿ ಅಧಿಕಾರಿಗಳ ತಂಡ ಬಂಧಿಸಿದೆ..

ACB raid when engineer caught receiving bribe
ಲಂಚ ಪಡೆಯುತ್ತಿದ್ದ ಇಂಜಿನಿಯರ್ ಎಸಿಬಿ ಬಲೆಗೆ
author img

By

Published : Sep 18, 2021, 8:13 PM IST

ಕೊಡಗು : ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಪಂಚಾಯತ್‌ ರಾಜ್ ಇಲಾಖೆ ಮುಖ್ಯ ಇಂಜಿನಿಯರ್‌ವೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುತ್ತಿದ್ದ ಇಂಜಿನಿಯರ್ ಎಸಿಬಿ ಬಲೆಗೆ

ಜಿಲ್ಲಾ ಪಂಚಾಯತ್‌ ರಾಜ್ ಇಲಾಖೆ ಮುಖ್ಯ ಎಂಜಿನಿಯರ್ ಶ್ರೀಕಂಠಯ್ಯ ಮತ್ತು ಸಹಾಯಕ ಇಂಜಿನಿಯರ್ ತೌಸಿಪ್ ಎಂಬುವರು ರಸ್ತೆ ಮತ್ತು ಚರಂಡಿ ಕಾಮಗಾರಿ ಗುತ್ತಿಗೆ ವಿಚಾರವಾಗಿ ಗುತ್ತಿಗೆದಾರ ನಂದಾ ಎಂಬುವರ ಬಳಿ ₹2.95 ಲಕ್ಷ ಲಂಚ ಕೇಳಿದ್ದರಂತೆ. ಈ ಹಿಂದೆ ₹75 ಸಾವಿರ ಪಡೆದಿದ್ದ ಶ್ರೀಕಂಠಯ್ಯ, ಇಂದು 1.92 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

engineer
ಇಂಜಿನಿಯರ್ ಎಸಿಬಿ ಬಲೆಗೆ

ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಮಳೆ ಹೆಚ್ಚಾಗಿ ಬೆಟ್ಟ ಕುಸಿತವಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆ ಸರಿಪಡಿಸಲು ಹಣ ಬಿಡುಗಡೆ ಮಾಡುವ ವಿಚಾರವಾಗಿ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಎಸಿಬಿಗೆ ದೂರ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಎಸಿಬಿ ಡಿವೈಎಸ್ಪಿ ತಿಪ್ಪಣ್ಣ ನೇತೃತ್ವದ ತಂಡ ದಾಳಿ ಮಾಡಿತ್ತು.

ಈ ಹಿಂದೆ ಶ್ರೀಕಂಠಯ್ಯ ಲಂಚ ಪಡೆದು ಎಸಿಬಿ ಬಲೆಗೆ ಬಿದ್ದು ಅಮಾನತುಗೊಂಡಿದ್ದರು. ಕರ್ತವ್ಯಕ್ಕೆ ಹಾಜರಾಗಿ ಮತ್ತೆ ಅದೇ ಕೆಲಸ ಮಾಡಿದ್ದಾರೆ. ಶ್ರೀಕಂಠಯ್ಯ ಜೊತೆಗೆ ಎಂಜಿಯರ್ ತೌಸಿಪ್ ಎಂಬುವರನ್ನು ಎಸಿಬಿ ಅಧಿಕಾರಿಗಳ ತಂಡ ಬಂಧಿಸಿದೆ.

ಓದಿ: ಚಿಕ್ಕೋಡಿ : ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.