ETV Bharat / state

ಬೇಟೆಗೆ ಹೋಗಿದ್ದ ನಾಲ್ವರಲ್ಲಿ ಒಬ್ಬ ಶವವಾಗಿ ಪತ್ತೆ - ಮಡಿಕೇರಿಯ ಕಾವೇರಿ ನದಿಯಲ್ಲಿ ಶವ ಪತ್ತೆ

ಬೇಟೆಗೆಂದು ಕಾಡಿಗೆ ತೆರಳಿದ್ದ ಸ್ನೇಹಿತರಲ್ಲಿ ಒಬ್ಬ ವ್ಯಕ್ತಿ ಇಂದು ಬೆಳಗ್ಗೆ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

KN_mdk
ಮೃತ ವ್ಯಕ್ತಿ
author img

By

Published : Oct 14, 2022, 3:31 PM IST

ಮಡಿಕೇರಿ: ಬೇಟೆಗೆಂದು ಕಾಡಿಗೆ ಹೋಗಿದ್ದ ನಾಲ್ಕು ಜನ ಸ್ನೇಹಿತರಲ್ಲಿ ಓರ್ವ ಶವವಾಗಿ ನೀರಿನಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ವಿರೂಪಾಕ್ಷಪುರ ಗ್ರಾಮದ ನಿವಾಸಿ, ಆಟೋ ಚಾಲಕ ವಿನೋದ್(29) ಬೇಟೆಗೆ ಹೋಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೃತ ವಿನೋದ್ ಮತ್ತು ಸ್ನೇಹಿತರು ಬಂದೂಕು ಹಿಡಿದು ಬೇಟೆಗೆಂದು ಕಾಡಿಗೆ ಹೋಗಿದ್ದಾರೆ. ಕಾನೂನು ಬಾಹಿರವಾಗಿರುವ ಬೇಟೆಗೆ ಹೋದ ನಾಲ್ವರಲ್ಲಿ ವಿನೋದ್​ ಎಂಬುವವರು ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಒಂದೇ ಗ್ರಾಮದ ಸ್ನೇಹಿತರಾದ ಧರ್ಮ, ಯೋಗೇಶ್, ಈಶ್ವರ ಸೇರಿ ಬೇಟೆಗೆ ಹೋಗಿದ್ದರು. ಪಕ್ಕದಲ್ಲಿರುವ ನದಿ ದಾಟಿ ಬೈಲುಕೊಪ್ಪ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿಗೆ ತೆರಳಿದ್ದಾರೆ. ರಾತ್ರಿ‌ ಯಾರು ಮನೆಗೆ ಬಂದಿರಲಿಲ್ಲ ಮರುದಿನ‌ ಮೂವರು ಮಾತ್ರ ಮನೆಗೆ ವಾಪಸ್​​ ಬಂದಿದ್ದರು, ಆದರೆ ವಿನೋದ್ ಮಾತ್ರ ಬರದೇ ಇರುವ ಹಿನ್ನೆಲೆ ಮನೆಯವರಿಗೆ ಗಾಬರಿಯಾಗಿದೆ. ಬಳಿಕ ವಿನೋದ್​ ಜೊತೆ ತೆರಳಿದ್ದ ಸ್ನೇಹಿತರನ್ನು ವಿಚಾರಿಸಿದಾಗ ಯಾರೊಬ್ಬರು ಮಾಹಿತಿ ನೀಡಿರಲಿಲ್ಲ.

ಇನ್ನು ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು. ಬಳಿಕ ಹುಡುಕಾಟ ನಡೆಸಿದ ಪೊಲೀಸರಿಗೆ ವಿನೋದ್​ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಕಾವೇರಿ ನದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಿನೋದ್ ಮೃತ ದೇಹ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋದ ರೈತ: ಈಜಲು ಹೋಗಿ ನೀರುಪಾಲಾದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.