ETV Bharat / state

ತರಕಾರಿ ಮಾರಿ ಜೀವನ: ವೃತ್ತಿ ಬದಲಿಸಿ ಕೊರೊನಾ ಕಲಿಸಿತು ಬದುಕಿನ ಪಾಠ - vegetable sales career

ಹಸಿವು ಮತ್ತು ಜೀವನ ಸಾಗಿಸುವ ಸವಾಲುಗಳ ಮಧ್ಯೆ ಮಹಿಳೆಯೊಬ್ಬರು ತಾವೇ ವಾಹನ ಓಡಿಸಿಕೊಂಡು ತರಕಾರಿಗಳನ್ನು ಮಾರಾಟ ಮಾಡುತ್ತಾ ಛಲದಿಂದ ಜೀವನ ನಡೆಸುತ್ತಿದ್ದಾರೆ.

A woman living a vegetable sales career
ವೃತ್ತಿ ಬದಲಿಸಿ ಕೊರೊನಾ ಕಲಿಸಿತು ಬದುಕಿನ ಪಾಠ
author img

By

Published : Jul 28, 2020, 10:52 PM IST

ಕೊಡಗು/ಮಡಿಕೇರಿ: ಕೊರೊನಾ ನಂತರ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಸೋಂಕು ಸಂಕಷ್ಟಗಳ ಜೊತೆ ಜೊತೆಗೆ ವೈಯಕ್ತಿಕ ಸ್ವಚ್ಛತೆ, ವೃತ್ತಿ ಮಾರ್ಪಾಡುಗಳಿಂದ ಜೀವನದ ಬಂಡಿಯನ್ನು ನಡೆಸುವ ಕಲೆಯನ್ನು ಕಲಿಸಿದೆ. ಹಸಿವು ಮತ್ತು ಜೀವನ ಸಾಗಿಸುವ ಸವಾಲುಗಳ ಮಧ್ಯೆ ಮಹಿಳೆಯೊಬ್ಬರು ತಾವೇ ವಾಹನ ಓಡಿಸಿಕೊಂಡು ತರಕಾರಿಗಳನ್ನು ಮಾರಾಟ ಮಾಡುತ್ತಾ ಛಲದಿಂದ ಜೀವನ ನಡೆಸುತ್ತಿದ್ದಾರೆ.

ಕುಮಾರಿ ಎಂಬ ಮಹಿಳೆ ಸುಮಾರು ಹತ್ತು ವರ್ಷಗಳಿಂದ ಮಡಿಕೇರಿ ನಗರದಲ್ಲೇ ವಾಸಿಸುತ್ತಿದ್ದಾರೆ. ಮೊದಲಿನಿಂದಲೂ ಸಂಕಷ್ಟದಿಂದಲೇ ಜೀವನವನ್ನು ನಡೆಸುತ್ತಿರುವ ಇವರು, ಕೊರೊನಾ ಪ್ರಾರಂಭಕ್ಕೂ‌ ಮೊದಲು ಬ್ಯಾಂಕಿನಲ್ಲಿ 5 ಲಕ್ಷ ರೂ ಸಾಲ ಪಡೆದುಕೊಂಡು ಚಿಕ್ಕದಾದ ಟಾಟಾ ಏಸ್ ಗಾಡಿಯನ್ನು ಖರೀದಿಸಿ, ಪಾನಿಪೂರಿ ಮಾರಾಟಕ್ಕೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಂಡಿದ್ದರು. ಆದರೆ ವ್ಯಾಪಾರ ಪ್ರಾರಂಭಿಸಿದ ಕೇವಲ ಐದು ದಿನಗಳಲ್ಲೇ ಬರಸಿಡಿಲಿನಂತೆ ಬಂದ ಕೊರೊನಾ ಇವರನ್ನು ಸಂಕಷ್ಟಕ್ಕೆ ದೂಡಿತ್ತು.‌

ವ್ಯಾಪಾರವೇ ಇಲ್ಲದೆ ಸಂಕಷ್ಟದಲ್ಲಿದ್ದ ಕುಮಾರಿ ಧೃತಿಗೆಡಲಿಲ್ಲ. ಕುಟುಂಬದ ನಿರ್ವಹಣೆಗೆ ಪಾನಿಪೂರಿ ಗಾಡಿಯಲ್ಲೇ ತರಕಾರಿಗಳನ್ನು ಹಾಕಿಕೊಂಡು ನಗರ ಹಾಗೂ ಹಳ್ಳಿ, ಹಳ್ಳಿಗಳಿಗೆ ಸ್ವತಃ ತಾವೇ ವಾಹನವನ್ನು ಓಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದಿಂದ ಅಷ್ಟೇನು ಆದಾಯ ಇಲ್ಲದಿದ್ದರೂ ಕುಟುಂಬದ ನಿರ್ವಹಣೆಗೆ ಹಾಗೂ ಬ್ಯಾಂಕಿನ ಸಾಲವನ್ನು ತೀರಿಸುತ್ತಿದ್ದಾರೆ.

ತರಕಾರಿ ಮಾರಾಟ ಜೀವನ ನಡೆಸುತ್ತಿರುವ ಮಹಿಳೆ

‌ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಇವರು ಶಾಲೆಗೆ ರಜೆ ಇರುವುದರಿಂದ ಮಗನನ್ನು ಜೊತೆಗೆ ಕರೆದುಕೊಂಡು ವ್ಯಾಪಾರಕ್ಕೆ ಹೋಗುತ್ತಾರೆ. ತಾವೇ ವಾಹನವನ್ನು ಓಡಿಸುವುದನ್ನು ನೋಡಿ ಕೆಲವರು ಗೇಲಿ ಮಾಡಿದ್ರೆ‌ ಹಾಗೆಯೇ ಕೆಲವರು ನಗುತ್ತಾರೆ. ಹಾಗಂತ ಮನೆಯಲ್ಲಿ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಿಸಿಕೊಳ್ಳಲು ಆಗುತ್ತಾ.? ಅದಕ್ಕೆಲ್ಲ ಅಂಜಿ ಕುಳಿತರೆ ಬದುಕಿನ ಬಂಡಿ ಸಾಗುವುದಿಲ್ಲ ಎನ್ನುವುದು ಮಹಿಳೆಯ ಸ್ವಾವಲಂಬನೆ ಮಾತುಗಳು.

ವಾಹನ ಚಲಾಯಿಸಲು ಪುರುಷರೇ ಹೆಣಗಾಡುತ್ತಾರೆ. ಅಂಥದ್ದರಲ್ಲಿ ಅವರೇ ವಾಹನ ಓಡಿಸಿಕೊಂಡು ತರಕಾರಿಗಳನ್ನು ಮಾರುತ್ತಿರುವುದು ಬೇರೆಯವರಿಗೂ ಮಾದರಿಯಾಗಿದೆ. ಕೊರೊನಾ ನಂತರ ಲಾಕ್‌ಡೌನ್ ಘೋಷಿಸಿದ ಪರಿಣಾಮ ಪಾನಿಪೂರಿ ತಿನ್ನಲು ಜನತೆ ಹೆದರಿದ್ದಾರೆ. ಆದರೆ ಇವರು ಅದೊಂದೇ ಕೆಲಸಕ್ಕೆ ಸೀಮಿತವಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಏಕೆ ಅಂಜಿಕೊಳ್ಳಬೇಕು?. ಅವರ ಕೆಲಸ ಇತರರಿಗೂ ಮಾದರಿ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಲಾಕ್‌ಡೌನ್ ನೆಪ ಮಾಡಿಕೊಂಡು ಒಂದೇ ಕೆಲಸಕ್ಕೆ ಅಂಟಿಕೊಂಡು ಜೀವನವನ್ನು ಸವಾಲಿನಂತೆ ಸ್ವೀಕರಿಸುವವರಿಗೆ ಈಕೆ ಮಾದರಿ ಆಗಿದ್ದಾರೆ. ಹಾಗೆಯೇ ಯಾರಾದರೂ ದಾನಿಗಳು ಇಂತಹವರಿಗೆ ಆರ್ಥಿಕ ನೆರವು ನೀಡಿದರೆ ಮತ್ತಷ್ಟು ಅನುಕೂಲ ಆಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.