ಕೊಡಗು: ಕಾವೇರಿ ನೀರಿನ ಪ್ರವಾಹದಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಜೀಪೊಂದು ಸಿಲುಕಿಕೊಂಡಿದ್ದ ಘಟನೆ ನಾಪೋಕ್ಲು ಹೊದ್ದೂರು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಕಡೆಯಿಂದ ಅಯ್ಯಂಗೇರಿ ಗ್ರಾಮಕ್ಕೆ ನೀಲಿ ಬಣ್ಣದ ಜೀಪಿನಲ್ಲಿ ಮಹಿಳೆ ಸೇರಿದಂತೆ ಮೂರು ಜನರು ಸಂಚರಿಸುತ್ತಿದ್ದರು. ರಸ್ತೆಯಲ್ಲಿ ನೀರಿನಮಟ್ಟ ಕಡಿಮೆ ಇರಬಹುದು ಎಂದು ಭಾವಿಸಿದ ಚಾಲಕ ರಸ್ತೆಯನ್ನು ದಾಟಲು ಪ್ರಯತ್ನಿಸಿದ್ದಾನೆ. ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ ಜೀಪಿಗೆ ಅರ್ಧದಷ್ಟು ನೀರು ಆವೃತವಾಗಿ ರಸ್ತೆ ಮಧ್ಯದಲ್ಲಿಯೇ ಜೀಪು ನಿಂತಿದೆ.
ಇದರಿಂದ ಜೀಪಿನಲ್ಲಿದ್ದವರು ಭಯಭೀತರಾಗಿದ್ದಾರೆ. ಇದೇ ಸ್ಥಳಕ್ಕೆ ಪ್ರವಾಹ ವೀಕ್ಷಣೆಗೆ ಬಂದ ಕೊಟ್ಟಮುಡಿ ನಿವಾಸಿಗಳಾದ ಮೊಹಮ್ಮದ್ ಹಾಗೂ ಅಬ್ದುಲ್ಲಾ ಎಂಬುವವರಿಗೆ ರಸ್ತೆ ಮಧ್ಯದ ಪ್ರವಾಹದ ನೀರಿನಲ್ಲಿ ಜೀಪು ನಿಂತಿರೋದು ಗೋಚರಿಸಿದೆ. ಕೂಡಲೇ ಕಾರ್ಯಪ್ರವತ್ತರಾಗಿ ಸ್ವಗ್ರಾಮದ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಸಹಾಯದಿಂದ ಜೀಪ್ ಅನ್ನು ನೀರಿನಿಂದ ಎಳೆದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ: ಗೋವಾದಿಂದ ವಾಪಸ್ಸಾಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ: ಹೈದರಾಬಾದ್ನ ಒಂದೇ ಕುಟುಂಬದ ನಾಲ್ವರು ಸಾವು