ಕೊಡಗು: ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟಗಾರರು ಹೆಚ್ಚಾಗಿದ್ದು, ಮಾರಾಟಕ್ಕೆ ಬ್ರೇಕ್ ಹಾಕಲು ಪೋಲಿಸ್ ಇಲಾಖೆ ಸಜ್ಜಾಗಿದೆ. ಈ ಒಂದು ಕ್ರಮದಲ್ಲಿ ಪೊಲೀಸರು, ಮಾರಾಟಗಾರರು ಮತ್ತು ಸೇವನೆ ಮಾಡುತ್ತಿದ್ದ ವ್ಯಕ್ತಿಗಳನ್ನು ಸೇರಿ ಜಿಲ್ಲೆಯಲ್ಲಿ 25 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿಗಳ ಬಳಿ ಇದ್ದ ಗಾಂಜಾ , ಎಲ್ಎಸ್ಡಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬಂಧಿತರಲ್ಲಿ 14 ಜನ ಪ್ರವಾಸಿಗರಿದ್ದು, ಇವರು ಹೋಂ ಸ್ಟೇಯೊಂದರಲ್ಲಿ ಮಾದಕವಸ್ತು ಸೇವಿಸುತ್ತಿದ್ದರು. ಅಲೀಂ ಅಹ್ಮದ್, ಮೋಸಿನ್, ಸಾಗರ್, ರೆಹಮಾನ್, ಚೇತನ್, ಶಮೀರ್, ನಿಸಾರ್, ಜಬ್ಬಾರ್, ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 1.7 ಕೆಜಿ ಗಾಂಜಾ, ಎಲ್ಎಸ್ಡಿ ಮಾತ್ರೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದಷ್ಟೇ ಜಿಲ್ಲೆಯಲ್ಲಿ 6 ಡ್ರಕ್ಸ್ ಮಾರಾಟಗಾರನ್ನು ಬಂಧಿಸಲಾಗಿದ್ದು, ಈಗ 25 ಜನರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಹೋಂ ಸ್ಟೇ ಮಾಲೀಕನೂ ಇದ್ದು, ಪೊಲೀಸರು ಎಲ್ಎಸ್ಡಿ ಡ್ರಗ್ಸ್ ಹಾಗೂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಮಕ್ಕಂದೂರಿನಲ್ಲಿರುವ ಹೋಂ ಸ್ಟೇಯೊಂದರಲ್ಲಿ 14 ಟೂರಿಸ್ಟ್ ಹುಡುಗರು ಬಂದಿದ್ದರು. ತಮಗೆ ಬಂದ ಮಾಹಿತಿ ಆಧಾರದ ಮೇಲೆ ನಾವು ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದೇವೆ. ಮಂಗಳೂರು ಮೂಲದ ಯುವಕರು 414 ಗ್ರಾಮ್ಗಳಷ್ಟು ಗಾಂಜಾ ಹಾಗೂ 9 ಎಲ್ಎಸ್ಡಿಗಳನ್ನು ಹೊಂದಿದ್ದರು ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಹೃತಿಕ್ (23), ವಿಘ್ನೇಶ್ ಅಜಿತ್ (21), ಸುಮನ್ ಎಚ್ (26), ಚಿರಾಗ್ ಎಸ್ (24), ಮಂಜುನಾಥ್ (30), ಲತೀಶ್ ನಾಯಕ್ (32), ಸಚಿನ್ (26), ರಾಹುಲ್ (26), ಪ್ರಜ್ವಲ್ (32), ಅವಿನಾಶ್ (28), ಪ್ರತೀಕ್ ಕುಮಾರ್ (27), ಧನುಷ್ (28), ರಾಜೇಶ್ (45) ಮತ್ತು ದಿಲ್ರಾಜ್ (30) ಬಂಧಿತ ಯುವಕರಾಗಿದ್ದು, ಎಲ್ಲರೂ ಮಂಗಳೂರು ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ 79 ಕೆಜಿ ಗಾಂಜಾ ಜಪ್ತಿ: ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿ ವಿವಿಧ ರಾಜ್ಯಗಳಿಂದ ನಗರಕ್ಕೆ ತಂದು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮಹಿಳೆ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ 79 ಕೆಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಜುಲೈ 6ರಂದು ಬೆಳಕಿಗೆ ಬಂದಿತ್ತು.
ರೈಲು ಹಾಗೂ ಬಸ್ ಮಾರ್ಗವಾಗಿ ನಗರದಲ್ಲಿ ಅವ್ಯವಾಹತವಾಗಿ ನಗರಕ್ಕೆ ತಂದು ಸಣ್ಣ ಪೊಟ್ಟಣಗಳಲ್ಲಿ ಇಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಮಧುಸ್ಮಿತಾ, ನರೇಶ್, ದಿಲ್ಮಾಜ್, ಸುಬ್ರತ್ ಪ್ರಧಾನ್, ರಾಜ್ ಮೋಹನ್ ಹಾಗೂ ಲಕ್ಷ್ಮೀಕಾಂತ್ ಸೇರಿ ಒಟ್ಟು 8 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸತತ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ 79 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಆಂಧ್ರ, ಒಡಿಶಾದಿಂದ ಬರುತ್ತಿದ್ದ ಗಾಂಜಾವನ್ನ ಅಬಕಾರಿ ಇಲಾಖೆಯ ನಗರದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ವೀರಣ್ಣ ಬಾಗೆವಾಡಿ ನೇತೃತ್ವದ ತಂಡ ತಡೆದಿತ್ತು. ಅಬಕಾರಿ ಅಧಿಕಾರಿಗಳ ಕೈಗೆ ಲೇಡಿ ಪೆಡ್ಲರ್ ಲಾಕ್ ಆಗಿದ್ದು ಒಡಿಶಾದಿಂದ ಬರ್ತಿದ್ದ ಪೆಡ್ಲರ್ ಮದುಸ್ಮಿತಾ ಮತ್ತು ನರೇಶ್ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನ ಅರೆಸ್ಟ್ ಮಾಡಿ ಸುಮಾರು 18 ಕೆಜಿ ಗಾಂಜಾ ಸೀಜ್ ಮಾಡಿದ್ದರು.