ETV Bharat / state

ಕೊಡಗಿನ 14 ಮಂದಿಗೆ ಕೊರೊನಾ... ಸೋಂಕಿತರ ಸಂಖ್ಯೆ 560ಕ್ಕೆ ಏರಿಕೆ - Kodagu corona news

ಜಿಲ್ಲೆಯಲ್ಲಿಂದು 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 560, ಮೃತರ ಸಂಖ್ಯೆ 10ಕ್ಕೆ ತಲುಪಿದೆ.

DC anis kanmani jay
DC anis kanmani jay
author img

By

Published : Aug 4, 2020, 7:01 PM IST

ಕೊಡಗು: ಜಿಲ್ಲೆಯಲ್ಲಿ ಇಂದು 14 ಕೊರೊನಾ‌ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 560ಕ್ಕೆ ಏರಿಕೆಯಾಗಿವೆ.‌

ಇಂದು ಮಡಿಕೇರಿ ತಾಲೂಕಿನ ಗಾಳೀಬೀಡುವಿನ ಮೊಣ್ಣಂಗೇರಿಯ 76 ವರ್ಷದ ವೃದ್ಧ, 60 ವರ್ಷದ ವೃದ್ಧೆ ಮತ್ತು 33 ವರ್ಷದ ಮಹಿಳೆ, 6 ವರ್ಷದ ಬಾಲಕ, 28 ವರ್ಷದ ಮಹಿಳೆ, 37 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಮತ್ತು ಸೋಮವಾರಪೇಟೆ ತಾಲೂಕಿನ ಅಬ್ಬೂರು ಕಟ್ಟೆ ಯಲಕ್ನೂರುವಿನ 21 ಮತ್ತು 49 ವರ್ಷದ ಮಹಿಳೆಯರಿಗೆ, ಬಸವನಹಳ್ಳಿಯ ಮೋರಿಕಲ್ಲುವಿನ 38 ವರ್ಷದ ಮಹಿಳೆ, 8 ಮತ್ತು 6 ವರ್ಷದ ಬಾಲಕಿಗೆ ಸೋಂಕು ವಕ್ಕರಿಸಿದೆ.‌ ಹಾಗೂ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 28 ವರ್ಷದ ಪುರುಷ, ಮಡಿಕೇರಿಯ ಕನ್ನಂಡಬಾಣೆಯ 26 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಒಟ್ಟು ಸೋಂಕಿತರ ಪೈಕಿ 342 ಮಂದಿ ಗುಣಮುಖರಾಗಿದ್ದು, 208 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿನ 151 ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದೆಯೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.