ಕೊಡಗು: ಜಿಲ್ಲೆಯಲ್ಲಿ ಇಂದು ಮತ್ತೆ 13 ಹೊಸ ಕೊರೊನಾ ಪ್ರಕರಣ ವರದಿಯಾಗಿವೆ. ಲಾಕ್‌ಡೌನ್ ಹಿನ್ನೆಲೆ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಬೆಂಗಳೂರಿನಿಂದ ಬಂದಿದ್ದ ಮಡಿಕೇರಿ ತಾಲೂಕಿನ ಮರಗೋಡಿನ ಸೋಂಕಿತನ ಸಂಪರ್ಕದಿಂದ ಐವರಿಗೆ ಪಾಸಿಟಿವ್ ಬಂದಿದೆ. ಅಲ್ಲದೆ ಮತ್ತೊಬ್ಬ ಸೋಂಕಿತನಿಂದ ಮೂವರಿಗೆ ವೈರಸ್ ತಗುಲಿದೆ. ಜೊತೆಗೆ ಬೆಂಗಳೂರಿನಿಂದ ಹಿಂದಿರುಗಿದ್ದ ಮುತ್ತಾರುಮುಡಿ ಗ್ರಾಮದ ವ್ಯಕ್ತಿಗೆ ಹಾಗೂ 28 ವರ್ಷದ ಮಹಿಳೆಗೆ ಸಹ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಐಎಲ್ಐನಿಂದ ಬಳಲುತ್ತಿದ್ದ ನಾಲ್ವರಿಗೆ ಕೋವಿಡ್-19 ತಗುಲಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ 252ಕ್ಕೆ ಏರಿಕೆಯಾಗಿದೆ.