ETV Bharat / state

ಕೊರೊನಾ ಹಿನ್ನೆಲೆ ದೇವಸ್ಥಾನ ಬಂದ್​: ಗೇಟ್​ ಹೊರಗಡೆಯೇ ಭಕ್ತರ ಪೂಜೆ ಪುನಸ್ಕಾರ - Worship by devotees outside the gate in Sharanabasaveshwara Temple

ಇಂದು ಶ್ರಾವಣ ತಿಂಗಳ ಮೊದಲ ಸೋಮವಾರ. ಈ ಹಿನ್ನೆಲೆ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ಒಳ ಪ್ರವೇಶಿಸಲು ಅವಕಾಶವಿಲ್ಲದ ಹಿನ್ನೆಲೆ ಗೇಟ್​ ಹೊರಗಡೆಯೇ ಪೂಜೆ ಸಲ್ಲಿಸಿ ತೆರಳಿದರು.

Worship by devotees outside the gate
ಗೇಟ್​ ಹೊರಗಡೆಯೇ ಭಕ್ತರಿಂದ ಪೂಜೆ ಪುನಸ್ಕಾರ
author img

By

Published : Jul 20, 2020, 1:36 PM IST

ಕಲಬುರಗಿ : ಶ್ರಾವಣದ ಒಂದು ತಿಂಗಳು ನಗರದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತ ಸಮೂಹವೇ ಹರಿದು ಬರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ದೇವಸ್ಥಾನದ ಬಾಗಿಲು ಮುಚ್ಚಲಾಗಿದ್ದು, ಭಕ್ತರು ಗೇಟ್​ ಬಳಿಯೇ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.

ಇಂದು ಶ್ರಾವಣ ತಿಂಗಳ ಮೊದಲ ಸೋಮವಾರದ ಹಿನ್ನೆಲೆ, ದೇವಸ್ಥಾನ ಬಳಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ಒಳ ಪ್ರವೇಶಿಸಲು ಅವಕಾಶವಿಲ್ಲದ ಹಿನ್ನೆಲೆ ಗೇಟ್​ ಹೊರಗಡೆಯೇ ಪೂಜೆ ಸಲ್ಲಿಸಿದರು.

ಗೇಟ್​ ಹೊರಗಡೆಯೇ ಭಕ್ತರಿಂದ ಪೂಜೆ ಪುನಸ್ಕಾರ

ಶೃದ್ಧಾ ಭಕ್ತಿಯಿಂದ ಶ್ರಾವಣ ಮಾಸದ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಭಕ್ತರು, ಶರಣ ಬಸವೇಶ್ವರ ದರ್ಶನ ಪಡೆಯುತ್ತಿದ್ದರು. ಉತ್ತರ ಕರ್ನಾಟಕದ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದರು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆ ಸಂಭ್ರಮ ಇಲ್ಲದಂತಾಗಿದೆ. ಈ ದೇವಸ್ಥಾನ ಮಾತ್ರವಲ್ಲದೇ, ಗಾಣಗಾಪೂರ ದತ್ತಾತ್ರೇಯ ದೇವಸ್ಥಾನ ಹಾಗೂ ಘತ್ತರಗಿ ಭಾಗಮ್ಮ ದೇವಿ ದೇಗುಲಗಳನ್ನು ಕೂಡ ಬಂದ್​ ಮಾಡಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.