ಕಲಬುರಗಿ : ಕರ್ತವ್ಯನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆ ಅಫ್ಜಲಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತಾಲೂಕಿನ ಅಂಕಲಗಾ ಗ್ರಾಮದ ಚಂದ್ರಕಾಂತ್ ಮೃತ ದುರ್ದೈವಿ. ಕಳೆದ 20 ವರ್ಷಗಳಿಂದ ಚಂದ್ರಕಾಂತ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಹೋದ್ಯೋಗಿಯ ಸಾವಿಗೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕಂಬನಿ ಮಿಡಿದರು.
ಸರಳ, ಸಜ್ಜನ ಪೇದೆ ಎನಿಸಿಕೊಂಡಿದ್ದ ಚಂದ್ರಕಾಂತ್ ನಿಧನಕ್ಕೆ ಸಹೋದ್ಯೋಗಿಗಳು, ನಾಗರಿಕರು ಕಣ್ಣೀರಾಗಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಚಂದ್ರಕಾಂತ್, ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಎದೆನೋವು , ಹೃದಯಾಘಾತ ಆಗುತ್ತಿದ್ದಂತೆಯೇ ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿಯೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ ಮೃತ ಚಂದ್ರಕಾಂತ್ ಜತೆಗಿನ ಒಡನಾಟ ಸ್ಮರಿಸಿದರು.