ಕಲಬುರಗಿ : ನೂತನ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ತಿಪ್ಪಣ್ಣಪ್ಪ ಕಮಕನೂರಗೆ ಕಲಬುರ್ಗಿಯಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.
ಬೆಂಗಳೂರಿನಲ್ಲಿ ಪದಗ್ರಹಣ ಮಾಡಿ ಕಲಬುರ್ಗಿಗೆ ಆಗಮಿಸಿದ ಕಮಕನೂರಗೆ ಅಭಿಮಾನಿಗಳು ಸ್ವಾಗತ ಕೋರಿದರು. ಸರ್ದಾರ್ ಪಟೇಲ್ ವೃತ್ತದಿಂದ ಅಭಿಮಾನಿಗಳು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿ ಕಾಂಗ್ರೆಸ್ ಕಚೇರಿಗೆ ಕರೆದೊಯ್ದರು.
ನಂತರ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಮತ್ತಿತರರು ನೂತನ ಎಂಎಲ್ಸಿಗೆ ಸನ್ಮಾನಿಸಿ ಗೌರವಿಸಿದರು. ಹಿಂದುಳಿದ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವಂತೆ ಕಮಕನೂರಗೆ ಕರೆ ನೀಡಿದರು.