ETV Bharat / state

ನಾವು ಕಿಂಗ್ ಮೇಕರ್​​ಗಳೇ ಹೊರತು ಕಿಂಗ್ ಆಗಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕಳೆದ ಆರು ತಿಂಗಳಿನಿಂದ ತೆರೆಮರೆಗೆ ಸರಿದಿದ್ದ ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ಮತ್ತೆ ಸುದ್ದಿಯಾಗಿದೆ. ಸರ್ಕಾರ ನೀಡಿದ್ದ ಗಡುವು ಅಂತ್ಯಗೊಂಡ ಹಿನ್ನೆಲೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Basava Marutyunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Sep 16, 2021, 8:00 AM IST

ಸೇಡಂ (ಕಲಬುರಗಿ): ನಾವು ಕಿಂಗ್ ಮೇಕರ್​​ಗಳೇ ಹೊರತು ಕಿಂಗ್ ಆಗಲ್ಲ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿಗಾಗಿ ಪಾದಯಾತ್ರೆ ಹಾಗೂ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಹಿನ್ನೆಲೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ವಿಧಾನಸಭೆ ಚುನಾವಣೆವರೆಗೂ 2ಎ ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಗದೇ ಇದ್ದಲ್ಲಿ, ರಾಜಕೀಯ ಸೇರುತ್ತೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕಿಂಗ್ ಮೇಕರ್​​​ಗಳಾಗುತ್ತೇವೆಯೇ ಹೊರತು ಕಿಂಗ್ ಆಗಲ್ಲ. ಸ್ವಾಮಿಗಳಿಗೆ ಕಾಣಿಕೆ ಕೊಟ್ಟು ಕಾಲಿಗೆ ಬೀಳ್ತಾರೆ ಹೊರತು, ವೋಟ್​ ಹಾಕಲ್ಲ. ರಾಜಕಾರಣಿಗಳಿಗೆ ಸಲಹೆ ಕೊಟ್ಟು ಆಶೀರ್ವಾದ ಮಾಡುವುದು ನಮ್ಮ ಪರಂಪರೆ ಎಂದರು.

ನಾವು ಕಿಂಗ್ ಮೇಕರ್​​ಗಳೇ ಹೊರತು ಕಿಂಗ್ ಆಗಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ಸಮಾಜದ ಜನರ ಕಷ್ಟ ಸುಖ ಅರಿತಿರುವ ಬೊಮ್ಮಾಯಿ, ಅಕ್ಟೋಬರ 1ರ ಒಳಗಾಗಿ ನಮಗೆ ಮೀಸಲಾತಿ ದೊರಕಿಸಿಕೊಡುವ ಭರವಸೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರ ಮುಖಾಂತರ ವರದಿ ಪಡೆಯಲಾಗುತ್ತಿದೆ ಎಂದರು.

ಇದನ್ನೂ ಓದಿ: "ನನ್ನ ಕಣ್ಣುಗಳನ್ನು ದಾನ ಮಾಡಿ"... ಡೆತ್​ನೋಟ್​ ಬರೆದಿಟ್ಟು ಬಿಜೆಪಿ ಸದಸ್ಯೆ ಆತ್ಮಹತ್ಯೆಗೆ ಶರಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.