ETV Bharat / state

ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ: ಜಗದೀಶ್ ಶೆಟ್ಟರ್ ವಿಶ್ವಾಸ

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆಯಲ್ಲಿ 15 ಸ್ಥಾನಗಳನ್ನೂ ಗೆಲ್ಲುತ್ತೇವೆ : ಜಗದೀಶ್ ಶೆಟ್ಟರ್
author img

By

Published : Nov 22, 2019, 11:35 AM IST

ಕಲಬುರಗಿ: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ: ಜಗದೀಶ್ ಶೆಟ್ಟರ್

ಕಲಬುರಗಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆಯಿದ್ದು, ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗಲಿದೆ ಎಂದರು.

ಕೆಲವೆಡೆ ಬಿಜೆಪಿಗೆ ಬಂಡಾಯದ ಬಿಸಿ ಇರೋದು ನಿಜ. ಎಲ್ಲಾ ಪಕ್ಷಗಳಲ್ಲಿಯೂ ಬಂಡಾಯ ಇದ್ದೇ ಇದೆ. ಆದ್ರೆ ಬಿಜೆಪಿಯಲ್ಲಿನ ಬಂಡಾಯ ಕ್ಷಣಿಕ. ಕೆಲವರ ಬಂಡಾಯ ಫಲಿತಾಂಶದ ಮೇಲೆ ಪರಿಣಾಮ ಬೀರೋಲ್ಲ ಎಂದು ಶೆಟ್ಟರ್​ ಅಭಿಪ್ರಾಯಪಟ್ಟರು.

ಮಾಜಿ ಸಿಎಂ ಕುಮಾರಸ್ವಾಮಿ ಒಂದು ಕಡೆ ಬಿಜೆಪಿ ಸರ್ಕಾರ ಬೀಳಿಸೋಕೆ ಅವಕಾಶ ನೀಡೋಲ್ಲ ಎನ್ನುತ್ತಾರೆ, ಮತ್ತೊಂದೆಡೆ ಅನರ್ಹರನ್ನು ಸೋಲಿಸೋದೆ ಗುರಿ ಅಂತ ಹೇಳ್ತಾರೆ. ಈ ರೀತಿ ದ್ವಂದ್ವ ಹೇಳಿಕೆ ನೀಡುತ್ತಿರುವ ಬಗ್ಗೆ ಕುಮಾರಸ್ವಾಮಿ ಅವರನ್ನೇ ಮಾಧ್ಯಮದವರು ಪ್ರಶ್ನಿಸಬೇಕು ಎಂದರು.

ಮತ್ತೊಂದೆಡೆ ತುಮಕೂರು ಜಿಲ್ಲೆಯ ಹುಳಿಯಾರುನಲ್ಲಿ ಕನಕ ವೃತ್ತ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶೆಟ್ಟರ್, ಅಲ್ಲಿ ಮಾಧುಸ್ವಾಮಿ ಮಾತನಾಡಿದ್ದೇ ಬೇರೆ, ಹೊರಗೆ ಪ್ರಚಾರ ಆಗಿದ್ದೇ ಬೇರೆ. ಪ್ರಕರಣ ಸುಖಾಂತ್ಯ ಕಂಡಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡಲ್ಲವೆಂದು ಹೇಳಿದ್ರು.

Intro:ಕಲಬುರಗಿ:ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನೂ ಗೆಲ್ತೇವೆ ಎಂದು ಮಾಜಿ ಸಿಎಂ,ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆಯಿದ್ದು, ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗಲಿದೆ ಎಂದರು.ಕೆಲವೆಡೆ ಬಿಜೆಪಿಗೆ ಬಂಡಾಯದ ಬಿಸಿ ಇರೋದು ನಿಜ. ಎಲ್ಲ ಪಕ್ಷಗಳಲ್ಲಿಯೂ ಬಂಡಾಯ ಇದ್ದೇ ಇದೆ. ಬಿಜೆಪಿಯಲ್ಲಿನ ಬಂಡಾಯ ಕ್ಷಣಿಕ. ಕೆಲವರ ಬಂಡಾಯ ಫಲಿತಾಂಶದ ಮೇಲೆ ಪರಿಣಾಮ ಬೀರೋಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಗೆದ್ದೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಿಎಂ ಕುಮಾರಸ್ವಾಮಿ ಒಂದು ಕಡೆ ಬಿಜೆಪಿ ಸರ್ಕಾರ ಬೀಳಿಸೋಕೆ ಅವಕಾಶ ನೀಡೋಲ್ಲ ಅನ್ತಾರೆ. ಮತ್ತೊಂದು ಕಡೆ ಅನರ್ಹರನ್ನು ಸೋಲಿಸೋದೆ ಗುರಿ ಅಂತ ಹೇಳ್ತಾರೆ. ಈ ರೀತಿ ದ್ವಂದ್ವ ಹೇಳಿಕೆ ನೀಡುತ್ತಿರುವ ಬಗ್ಗೆ ನೀವು ಕುಮಾರಸ್ವಾಮಿಯನ್ನು ಪ್ರಶ್ನಿಸಬೇಕು.ಕುಮಾರಸ್ವಾಮಿ ಹೇಳಿಕೆ ಗೊಂದಲಕಾರಿಯಾಗಿದೆ ಎಂದರು. ಹುಳಿಯಾರುನಲ್ಲಿ ಕನಕ ವೃತ್ತ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶೆಟ್ಟರ್, ಅಲ್ಲಿ ಮಾಧುಸ್ವಾಮಿ ಮಾತನಾಡಿದ್ದೇ ಬೇರೆ. ಹೊರಗೆ ಪ್ರಚಾರ ಆಗಿದ್ದೇ ಬೇರೆ. ಪ್ರಕರಣ ಸುಖಾಂತ್ಯ ಕಂಡಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.

ಬೈಟ್-ಜಗದೀಶ್ ಶೆಟ್ಟರ್,ಕೈಗಾರಿಕಾ ಸಚಿವ.Body:ಕಲಬುರಗಿ:ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನೂ ಗೆಲ್ತೇವೆ ಎಂದು ಮಾಜಿ ಸಿಎಂ,ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆಯಿದ್ದು, ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗಲಿದೆ ಎಂದರು.ಕೆಲವೆಡೆ ಬಿಜೆಪಿಗೆ ಬಂಡಾಯದ ಬಿಸಿ ಇರೋದು ನಿಜ. ಎಲ್ಲ ಪಕ್ಷಗಳಲ್ಲಿಯೂ ಬಂಡಾಯ ಇದ್ದೇ ಇದೆ. ಬಿಜೆಪಿಯಲ್ಲಿನ ಬಂಡಾಯ ಕ್ಷಣಿಕ. ಕೆಲವರ ಬಂಡಾಯ ಫಲಿತಾಂಶದ ಮೇಲೆ ಪರಿಣಾಮ ಬೀರೋಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಗೆದ್ದೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಿಎಂ ಕುಮಾರಸ್ವಾಮಿ ಒಂದು ಕಡೆ ಬಿಜೆಪಿ ಸರ್ಕಾರ ಬೀಳಿಸೋಕೆ ಅವಕಾಶ ನೀಡೋಲ್ಲ ಅನ್ತಾರೆ. ಮತ್ತೊಂದು ಕಡೆ ಅನರ್ಹರನ್ನು ಸೋಲಿಸೋದೆ ಗುರಿ ಅಂತ ಹೇಳ್ತಾರೆ. ಈ ರೀತಿ ದ್ವಂದ್ವ ಹೇಳಿಕೆ ನೀಡುತ್ತಿರುವ ಬಗ್ಗೆ ನೀವು ಕುಮಾರಸ್ವಾಮಿಯನ್ನು ಪ್ರಶ್ನಿಸಬೇಕು.ಕುಮಾರಸ್ವಾಮಿ ಹೇಳಿಕೆ ಗೊಂದಲಕಾರಿಯಾಗಿದೆ ಎಂದರು. ಹುಳಿಯಾರುನಲ್ಲಿ ಕನಕ ವೃತ್ತ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶೆಟ್ಟರ್, ಅಲ್ಲಿ ಮಾಧುಸ್ವಾಮಿ ಮಾತನಾಡಿದ್ದೇ ಬೇರೆ. ಹೊರಗೆ ಪ್ರಚಾರ ಆಗಿದ್ದೇ ಬೇರೆ. ಪ್ರಕರಣ ಸುಖಾಂತ್ಯ ಕಂಡಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.

ಬೈಟ್-ಜಗದೀಶ್ ಶೆಟ್ಟರ್,ಕೈಗಾರಿಕಾ ಸಚಿವ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.