ಕಲಬುರಗಿ: ಲಾಕ್ಡೌನ್ನಿಂದಾಗಿ ಬಡ ಜನತೆಗೆ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ಸರ್ಕಾರ ಉಚಿತ ಹಾಲು ವಿತರಣೆ ಯೋಜನೆ ಜಾರಿಗೆ ತಂದಿದ್ದು, ಕೆಲ ಮುಖಂಡರು ಮಾತ್ರ ಇದರಲ್ಲಿಯೂ ಓಟ್ ಬ್ಯಾಂಕ್ ಲಾಬಿ ನಡೆಸುತ್ತಿದ್ದಾರೆಂಬ ಆರೋಪಗಳು ಜಿಲ್ಲೆಯಲ್ಲಿ ಕೇಳಿ ಬಂದಿವೆ.
ಉಚಿತ ಹಾಲು ವಿತರಣೆಯಲ್ಲಿಯೂ ಓಟ್ ಬ್ಯಾಂಕ್ ಲಾಬಿ ನಡೆಸುತ್ತಿದ್ದು, ಬಡಾವಣೆಗಳಲ್ಲಿ ನಂದಿನಿ ಹಾಲನ್ನು ತಮಗೆ ಬೇಕಾದವರಿಗೆ ಮಾತ್ರ ವಿತರಿಸುತ್ತಿದ್ದಾರೆ. ಸ್ಥಳೀಯ ಮುಖಂಡರು ತಮಗೆ ಓಟು ನೀಡುವವರಿಗೆ ಮಾತ್ರ ಹಾಲು ಹಂಚಿಕೆ ಮಾಡಿ, ಬಡವರಿಗೆ ವಂಚನೆ ಮಾಡುತ್ತಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೇ, ನಿರ್ಗತಿಕರಿಗೆ, ಬಡವರಿಗೆ ಉಚಿತವಾಗಿ ವಿತರಿಸಬೇಕಾದ ನಂದಿನಿ ಹಾಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಿದ್ಯಾನಗರ ಸರ್ಕಾರಿ ಬಾಲಕಿಯರ ಹಾಸ್ಟೆಲ್ಗೆ ನೀಡಿದ ಹಾಲಿನ ಪಾಕೇಟ್‌ಗಳನ್ನು ಹಾಸ್ಟೆಲ್ ಸಿಬ್ಬಂದಿ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಾದ ಉಚಿತ ನಂದಿನಿ ಹಾಲು ಉಳ್ಳವರ ಪಾಲಾಗುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.