ಕಲಬುರಗಿ: ಸೆಪ್ಟೆಂಬರ್ 29ರಂದು ಜಿಲ್ಲಾ ವೀರಶೈವ ಮಹಾಸಭಾ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಹಾಸಭಾದ ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.
ಮಹಾಸಭಾ ಹಿಂದಿನ ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದ ಕುಟಿಂತವಾದ ಕಾರಣ ಮಹಾಸಭಾ ಸದಸ್ಯತ್ವವನ್ನು ಸ್ವಾಭಿಮಾನಿ ಬಳಗದ ನೇತೃತ್ವದಲ್ಲಿ ಅಭಿಯಾನ ನಡೆಸಿ ನಾಲ್ಕು ಸಾವಿರ ಗಡಿ ದಾಟುವಂತೆ ಮಾಡಲಾಗಿದೆ.
ಈ ಚುನಾವಣೆಯಲ್ಲಿ ವೀರಶೈವ ಸಮುದಾಯದ ಅನೇಕರು ಸ್ಪರ್ಧಿಸಲಿದ್ದಾರೆ ಎಂದು ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.