ETV Bharat / state

ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಮಹಾಸ್ವಾಮೀಜಿ ಲಿಂಗೈಕ್ಯ - ಸುಲೇಪೇಟದ ಖಟ್ವಾಂಗೇಶ್ವರ ವಿರಕ್ತ ಮಠ

ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಮಹಾಸ್ವಾಮೀಜಿ (46) ಸೋಮವಾರ ರಾತ್ರಿ 8.30ರ ಸುಮಾರಿಗೆ ಚಿತ್ರದುರ್ಗದಲ್ಲಿ ಲಿಂಗೈಕ್ಯರಾದರು. ಗುರುಲಿಂಗ ಸ್ವಾಮೀಜಿ ಚಿತ್ರದುರ್ಗ ಬೃಹನ್ಮಠದ ಶಾಖಾಮಠವಾಗಿರುವ ಖಟ್ವಾಂಗೇಶ್ವರ ಮಠಕ್ಕೆ 1991 - 92ರಲ್ಲಿ ನಿಯೋಜಿತರಾಗಿದ್ದರು. 1994ರಲ್ಲಿ ಪಟ್ಟಾಧಿಕಾರ ನಡೆಸಲಾಗಿತ್ತು.

swamiji
swamiji
author img

By

Published : Jul 14, 2020, 10:43 AM IST

ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟದ ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಮಹಾಸ್ವಾಮೀಜಿ (46) ಸೋಮವಾರ ರಾತ್ರಿ 8.30ರ ಸುಮಾರಿಗೆ ಚಿತ್ರದುರ್ಗದಲ್ಲಿ ಲಿಂಗೈಕ್ಯರಾದರು.

ಚಳ್ಳಕೇರಿಯ ಕಲ್ಲಯ್ಯ ಈರಮ್ಮ ದಂಪತಿಯ ನಾಲ್ಕನೇ ಪುತ್ರ ಗುರುಲಿಂಗ ಸ್ವಾಮೀಜಿ ಚಿತ್ರದುರ್ಗ ಬೃಹನ್ಮಠದ ಶಾಖಾಮಠ ಆಗಿರುವ ಖಟ್ವಾಂಗೇಶ್ವರ ಮಠಕ್ಕೆ 1991-92ರಲ್ಲಿ ನಿಯೋಜಿತರಾಗಿದ್ದರು. 1994ರಲ್ಲಿ ಪಟ್ಟಾಧಿಕಾರ ನಡೆಸಲಾಗಿತ್ತು.

virakta matha swamiji lingaikya
ಗುರುಲಿಂಗ ಮಹಾಸ್ವಾಮೀಜಿ

ಅ.27ರಂದು ಶ್ರೀಮಠದಿಂದ ಸ್ವಂತ ಕಾರಿನಲ್ಲಿ ತೆರಳುವಾಗ ಕಲಬುರಗಿ ಬಳಿಯ ಕಪನೂರ ಹತ್ತಿರ ರಸ್ತೆ ಅಪಘಾತದಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಮತ್ತು ಚಿತ್ರದುರ್ಗಕ್ಕೆ ಕಳುಹಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾಗಿದ್ದಾರೆ.

ಅಪಾರ ಭಕ್ತ ಸಮೂಹ ಬಿಟ್ಟು ಅಗಲಿದ ಶ್ರೀಗಳ ಅಂತ್ಯಕ್ರಿಯೆ ಸುಲೇಪೇಟ ಮಠದಲ್ಲಿ ನಾಳೆ ನೇರವೇರಲಿದೆ. ಚಿತ್ರದುರ್ಗ, ಕೊಪ್ಪಳ ಶ್ರೀಗಳು ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.