ETV Bharat / state

ಬಸ್ ವ್ಯವಸ್ಥೆ ಸ್ಥಗಿತಗೊಳಿಸಿದ್ದಕ್ಕೆ ಗ್ರಾಮಸ್ಥರ ಪ್ರತಿಭಟನೆ: ಆಕ್ರೋಶ - ಬಸ್ ವ್ಯವಸ್ಥೆ ಸ್ಥಗಿತಗೊಳಿಸಿದ್ದಕ್ಕೆ ಗ್ರಾಮಸ್ಥರಿಂದ ಪ್ರತಿಭಟನೆ

ಬಸ್ ಇಲ್ಲದೇ ನಿತ್ಯ ಗೋಳಾಟ ನಡೆದಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಾರಿಗೆ ಇಲಾಖೆ ಕ್ಯಾರೆ ಎನ್ನದ ಕಾರಣ ಇಂದು ಬೆಳಗ್ಗೆ 6 ಗಂಟೆಯಿಂದಲೇ ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ‌.

Villagers protest over shutdown of bus in Kalburagi
ಗ್ರಾಮಸ್ಥರಿಂದ ಪ್ರತಿಭಟನೆ
author img

By

Published : Jan 15, 2021, 11:05 AM IST

Updated : Jan 15, 2021, 1:17 PM IST

ಕಲಬುರಗಿ: ಹಾಗರಗುಂಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಸ್ಥಗಿತಗೊಳಿಸುರುವುದನ್ನು ಖಂಡಿಸಿ ಗ್ರಾಮಸ್ಥರು ಬೆಳಂ ಬೆಳಗ್ಗೆ ರಸ್ತೆಗಿಳಿದು ಹೋರಾಟ ಆರಂಭಿಸಿದ್ದಾರೆ.

ಬಸ್ ವ್ಯವಸ್ಥೆ ಸ್ಥಗಿತಗೊಳಿಸಿದ್ದಕ್ಕೆ ಗ್ರಾಮಸ್ಥರ ಪ್ರತಿಭಟನೆ

ಹಾಗರಗುಂಡಗಿಯಿಂದ ಬಹುತೇಕ ಜನರು ನಿತ್ಯ ಕಲಬುರಗಿ ಬಂದು ಹೋಗುತ್ತಾರೆ. ಕೆಲಸದ ನಿಮಿತ್ತ, ಸರಕಾರಿ ನೌಕರಿ, ಶಾಲಾ ಕಾಲೇಜು ಸೇರಿ ಪ್ರತಿಯೊಂದಕ್ಕೂ ಗ್ರಾಮಸ್ಥರು ಕಲಬುರಗಿ ಮೇಲೆ ಅವಲಂಬಿತರಾಗಿದ್ದಾರೆ. ಈ ಮುಂಚೆ ಗ್ರಾಮದಿಂದ ಒಂದು ಬಸ್ ಕಲಬುರಗಿಗೆ ಓಡಿಸಲಾಗುತಿತ್ತು. ಆದರೆ, ಲಾಕ್​ಡೌನ್ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಬಸ್ ಇಲ್ಲದೆ ನಿತ್ಯ ಗೋಳಾಟ ನಡೆದಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಾರಿಗೆ ಇಲಾಖೆ ಕ್ಯಾರೆ ಎನ್ನದ ಕಾರಣ ಇಂದು ಬೆಳಗ್ಗೆ 6 ಗಂಟೆಯಿಂದಲೇ ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ‌. ಪಕ್ಕದ ಮೈನಾಳ ಗ್ರಾಮಕ್ಕೆ ತೆರಳಿದ್ದ ಬಸ್ ತಡೆದು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮನವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಬಿಡುತ್ತಿಲ್ಲ, ತಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸುವವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಓದಿ : ಯಡಿಯೂರಪ್ಪಗೇ ಅಧಿಕಾರದ ವ್ಯಾಮೋಹ ಇರುವಾಗ ನನಗಿದ್ದರೆ ತಪ್ಪೇನು?: ಹಳ್ಳಿಹಕ್ಕಿ ಆಕ್ರೋಶ

Last Updated : Jan 15, 2021, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.