ಕಲಬುರಗಿ: ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ಕೇಂದ್ರದಲ್ಲಿದ್ದ ಅಪ್ರಾಪ್ತ ವಯಸ್ಸಿನ ಅವಿವಾಹಿತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಸೋಮನಳ್ಳಿಗೆ ವಲಸೆ ಹೋಗಿದ್ದ 16 ವರ್ಷದ ಬಾಲಕಿ ತನ್ನ ಪೊಷಕರೊಂದಿಗೆ ಅಲ್ಲಿ ವಾಸವಿದ್ದಳು. ಕಳೆದ ಭಾನುವಾರ ಶಹಾಬಾದ್ ಪಟ್ಟಣಕ್ಕೆ ಮರಳಿ ಬಂದಿದ್ದರು. ಶಹಾಬಾದ್ ಪಟ್ಟಣದ ಇಂದಿರಾನಗರ ಮಡ್ಡಿ ಸಂಖ್ಯೆ1 ರಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಬಾಲಕಿ ವಾಸವಿದ್ದಳು. ಇದೀಗ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಸ್ಥಳಕ್ಕೆ ತಹಶೀಲ್ದಾರ್ ಸುರೇಶ ವರ್ಮಾ, ಪಿಎಸ್ಐ ಬಿ. ಅಮರೇಶ್ ಭೇಟಿ ನೀಡಿದ್ದರು. ತಾಯಿ-ಮಗುವನ್ನು ಸ್ಥಳೀಯ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿ ಆಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.