ಕಲಬುರಗಿ: ಇಂದು ಸಂಜೆ ಸೇಡಂ ತಾಲೂಕಿನ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ಸಿಡಿಲಾಘಾತಕ್ಕೆ ಪತಿ-ಪತ್ನಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಸೋಂಪಲ್ಲಿ ಬಳಿ ನಡೆದಿದೆ.
ಕೊಂತನಪಲ್ಲಿ ನಿವಾಸಿಗಳಾದ ಖಾಜಾಸಾಬ ಉಸ್ಮಾನ ಸಾಬ (35) ಮತ್ತು ಆತನ ಪತ್ನಿ ಫರ್ಜಾನಾ ಉಸ್ಮಾನ ಸಾಬ (28) ಇವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠತ್ತಾಗಿ ಸಿಡಿಲು ಬಡಿದಿದೆ. ಕೂಡಲೇ ಇಬ್ಬರನ್ನೂ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಶಾರದಮ್ಮ (55), ಪಾರ್ವತಮ್ಮ (40), ಯಲ್ಲಪ್ಪ (26), ಆನಂದಪ್ಪ (35) ಎಂಬ ನಾಲ್ವರಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪಿಎಸ್ಐ ಶ್ರೀಮಂತ ಭೇಟಿ ನೀಡಿ ಪರಿಶೀಲಿಸಿದ್ದಾರೆ.