ಕಲಬುರಗಿ: ಜಿಲ್ಲೆಯಲ್ಲಿ ಮತ್ತೆರೆಡು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕಲಬುರಗಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಶಹಾಬಾದ್ನ 28 ವರ್ಷದ ಮಹಿಳೆಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಅದರಂತೆ ಇನ್ನೊಬ್ಬ ಪ್ರೈಮರಿ ಕಾಂಟೆಕ್ಟ್ ಹೊಂದಿದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾಗಿದೆ. ದೆಹಲಿಯ ತಬ್ಲಿಕ್ ನಿಜಾಮುದ್ದೀನ್ನಿಂದ ವಾಪಸ್ ಆದ ವ್ಯಕ್ತಿಯ ಸೊಸೆಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಕಳೆದ ಮೂರು ದಿನದ ಹಿಂದೆಯಷ್ಟೆ ಮಹಿಳೆಯ ಅತ್ತೆ 60 ವರ್ಷದ ವೃದ್ದೆಗೆ ಪಾಸಿಟಿವ್ ಪತ್ತೆಯಾಗಿತ್ತು.
ದೆಹಲಿಯ ತಬ್ಲಿಕ್ ನಿಜಾಮುದ್ದೀನ್ ಧಾರ್ಮಿಕ ಸಭೆಯಿಂದ ಮಾರ್ಚ್ 19 ರಂದು ವಾಪಸ್ ಆಗಿದ್ದ ಶಹಾಬಾದ ವ್ಯಕ್ತಿಯ ಕುಟುಂಬದಲ್ಲಿ ಇದೀಗ ಎರಡನೆ ಕೇಸ್ ಪತ್ತೆಯಾಗಿದೆ. ಅತ್ತೆಗೆ ಪಾಸಿಟಿವ್ ಬಂದ ಬಳಿಕ ಸೊಸೆ ಮತ್ತು ಮಗ ಮೊಮ್ಮಕ್ಕಳ ಸ್ಯಾಂಪಲ್ ಟೆಸ್ಟ್ ಆರೋಗ್ಯ ಇಲಾಖೆ ಮಾಡಿಸಿತ್ತು. ಇದೀಗ ಸೊಸೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೊಸೆಯನ್ನ ಕಲಬುರಗಿಯ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದುರಂತ ಎಂದರೆ 30 ವರ್ಷದ ಮಹಿಳೆಯ ಎರಡು ಚಿಕ್ಕ ಮಕ್ಕಳು ಆಕೆಯ ಜೊತೆ ನೇರ ಸಂಪರ್ಕ ಹೊಂದಿದ್ದರು. ಮಕ್ಕಳು ಮತ್ತು ಗಂಡ ನೇರ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮತ್ತುಷ್ಟು ಆತಂಕ ಹೆಚ್ಚಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 5 ರಿಂದ 7 ಕ್ಕೆ ಏರಿಕೆಯಾಗಿದೆ.