ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಮೃತಪಟ್ಟಿದ್ದು, ಹೊಸದಾಗಿ 75 ಜನರಿಗೆ ಸೋಂಕು ತಗುಲಿದೆ.
ನಗರದ ಹುಸೇನ್ ಗಾರ್ಡನ್ ನಿವಾಸಿ 80 ವರ್ಷದ ವೃದ್ಧ ಹಾಗೂ ಜೇವರ್ಗಿ ಕಾಲೋನಿ ನಿವಾಸಿ 53 ವರ್ಷದ ಮಹಿಳೆ ಸೋಂಕು ತಗುಲಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.
75 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 19,081 ಹಾಗೂ 202 ಜನರು ಗುಣಮುಖರಾಗಿದ್ದಾರೆ. ಗುಣಮುಖರಾದವರ ಸಂಖ್ಯೆ 17,921ಕ್ಕೆ ಏರಿಕೆಯಾಗಿದ್ದು, 859 ಸಕ್ರಿಯ ಪ್ರಕರಣಗಳಿವೆ.